ಜಯಲಲಿತಾ ರ್ಯಾಲಿಗಳಲ್ಲಿ ಮೃತರಾದವರಕುರಿತು ಮಾನವಹಕ್ಕು ಸಂಘಟನೆಗಳು ಮೌನವಾಗಿದೆ: ಕೇಂದ್ರ ಸಚಿವ

Update: 2016-04-24 11:21 GMT

ನಾಗರಕೊಯಿಲ್, ಎಪ್ರಿಲ್ 24: ಕೇಂದ್ರ ಸಚಿವ ಪಿ. ರಾಧಾಕೃಷ್ಣನ್ ತಮಿಳ್ನಾಡ್‌ನಲ್ಲಿ ಜೆ. ಜಯಲಲಿತಾರ ಚುನಾವಣೆ ಸಭೆಯಲ್ಲಿ ಜನರ ಮೃತ್ಯು ಸಂಭವಿಸಿದ ಕುರಿತು ಮಾನವಹಕ್ಕು ಸಂಘಟನೆಗಳು, ಚುನಾವಣೆ ಆಯೋಗ ಮತ್ತು ಇತರರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಚೆನ್ನೈಯಿಂದ ಸುಮಾರು 710 ಕಿ.ಮೀ ದೂರದಲ್ಲಿ ಪತ್ರಕರ್ತರೊಂದಿಗೆ ಮಾತಾಡಿದ ರಸ್ತೆ ಸಾರಿಗೆ, ಹೆದ್ದಾರಿ ಖಾತೆಯ ರಾಜ್ಯ ಸಚಿವ ರಾಧಾಕೃಷ್ಣನ್ ಇದು ಬಹಳ ವಿಚಿತ್ರ ಸ್ಥಿತಿಯಾಗಿದೆ.ಮಾನವಹಕ್ಕು ಸಂಘಟನೆಗಳು ಮತ್ತು ಚುನಾವಣಾ ಆಯೋಗ ಜಯಲಲಿತಾರ ಚುನಾವಣೆ ಸಭೆಗಳಲ್ಲಾದ ಸಾವುಗಳ ಕುರಿತು ಮೌನ ತಾಳಿವೆ. ಭಾರೀ ಸಂಖ್ಯೆಯಲ್ಲಿ ಜನರನ್ನು ವಾಹನಗಳಲ್ಲಿ ಜಾನುವಾರುಗಳನ್ನು ತುಂಬಿಕೊಂಡು ಬಂದಂತೆ ಜಯಲಲಿತಾರ ರ್ಯಾಲಿಗಳಿಗೆ ಕರೆತರಲಾಗುತ್ತಿದೆ. ಈ ವಿಚಾರವನ್ನು ಮುಚ್ಚಿಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿರೂಧಾಚಲಂ ಮತ್ತು ಸೇಲಂನಲ್ಲಿ ಆಯೋಜಿಸಲಾಗಿದ್ದ ಎರಡು ರ್ಯಾಲಿಗಳಲ್ಲಿ ನಾಲ್ವರು ಮೃತರಾಗಿದ್ದರು. ಬಿಸಿಲಿನ ಧಗೆಯ ಕಾರಣ ಮೃತರಾಗಿದ್ದರೆನ್ನಲಾಗಿದೆ. ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಬಸ್ ಮತ್ತು ಲಾರಿಗಳಲ್ಲಿ ತುಂಬಿಸಿ ತರಲಾಗಿತ್ತು. ಜನರು ಮೃತರಾದ ರ್ಯಾಲಿಯ ಆಯೋಜಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂಬುದನ್ನು ತಿಳಿಸಿ ಕೇಂದ್ರ ಸಚಿವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡಿಎಂಕೆ, ಅಣ್ಣಾಡಿಎಂಕೆ, ಮತ್ತು ಪಿಎಂಕೆಗಳು ಮೊದಲು ಘೋಷಿಸಿದ್ದ ಅಭ್ಯರ್ಥಿಗಳನ್ನು ಕೆಲವು ಕಡೆಬದಲಿಸಿವೆ. ಇದನ್ನು ಕೂಡಾ ಸಚಿವರು ತರಾಟೆಗೆತ್ತಿಕೊಂಡರೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News