×
Ad

ರಾಹುಲ್ ಟಿ ಶರ್ಟ್ ಬದಲಿಸಿದಂತೆ ವಿಚಾರ ಧಾರೆಗಳನ್ನು ಬದಲಿಸುತ್ತಿದ್ದಾರೆ: ತೃಣಮೂಲ ಕಾಂಗ್ರೆಸ್

Update: 2016-04-24 17:54 IST

  ಕೊಲ್ಕತಾ, ಎಪ್ರಿಲ್ 24: ರಾಹುಲ್ ಗಾಂಧಿ ತನ್ನ ವಿಚಾರಗಳನ್ನು ಟಿಶರ್ಟ್‌ನಂತೆ ಬದಲಾಯಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಶುಕ್ರವಾರ ಭ್ರಷ್ಟಾಚಾರ ವಿಚಾರದಲ್ಲಿ ರಾಹುಲ್ ಗಾಂಧಿ ತೃಣಮೂಲ ಕಾಂಗ್ರೆಸ್‌ನ್ನು ಟೀಕಿಸಿದ್ದರು.ಹವಾಡ ಮತ್ತು ಉತ್ತರ ಪರಗಣ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ರ್ಯಾಲಿ ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡೆರೆಕ್ ಬ್ರಯಾನ್ ಕಾಂಗ್ರೆಸ್ ಉಪಾಧ್ಯಕ್ಷರ ವಿಚಾರಧಾರೆಯನ್ನು ತಮಾಷೆ ಮಾಡಿದ್ದಾರಲ್ಲದೆ ರಾಹುಲ್‌ರ ಎರಡು ತದ್ವಿರುದ್ಧ ಇರುವ ಭಾಷಣಗಳ ವೀಡಿಯೊವನ್ನೂ ಪ್ರದರ್ಶಿಸಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಕೇರಳದಲ್ಲಿ ಫೆಬ್ರವರಿಯಲ್ಲಿ ಮತ್ತು ಬಂಗಾಳದಲ್ಲಿ ಈ ತಿಂಗಳು ಮಾಡಿದ ಭಾಷಣಗಳ ವೀಡಿಯೊವನ್ನು ಡೆರೆಕ್  ಪ್ರಸ್ತುತ ಪಡಿಸಿದ್ದಾರೆ. ಕೇರಳದಲ್ಲಿ ಸಿಪಿಐಎಂನ್ನು ಟೀಕಿಸಿದ ರಾಹುಲ್ ಎಡಪಂಥೀಯ ವಿಚಾರಧಾರೆಗಳು ಈಗ ವ್ಯರ್ಥವಾಗಿದೆ ಎನ್ನುತ್ತಿದ್ದಾರೆ. ಇನ್ನೊಂದು ಕಡೆ ಬಂಗಾಳದಲ್ಲಿ ಬಂದು ಎಡಪಕ್ಷ ಮತ್ತು ಕಾಂಗ್ರೆಸ್ ಕೂಟಕ್ಕೆ ವೋಟು ಕೇಳುತ್ತಿದ್ದಾರೆ. ಇಂತಹ ಎರಡು ತದ್ವಿರುದ್ಧ ಭಾಷಣಗಳ ವೀಡಿಯೊವನ್ನು ಪ್ರದರ್ಶಿಸಿದ ಡೆರೆಕ್‌ಬ್ರಯಾನ್ ರಾಹುಲ್ ಟೀಶರ್ಟ್‌ನಂತೆ ತನ್ನ ವಿಚಾರಧಾರೆಯನ್ನು ಬದಲಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.

  ಎಡಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಯನ್ನು ಟೀಕಿಸಿದ ಬ್ರಯಾನ್"ಒಮ್ಮೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಾಯಕರು ಪರಸ್ಪರ ವಿರುದ್ಧ ಮಾತಾಡುತ್ತಾರೆ. ನಂತರ ಇನ್ನೊಬ್ಬ ಹೇಳುತ್ತಾರೆ ಇದು ಪರಸ್ಪರ ಸಹಮತವಾಗಿದೆ ಎಂದೂ ಹೇಳುತ್ತಿದ್ದಾರೆ.ಮತ್ತೊಬ್ಬ ಇಂತಹ ಮೈತ್ರಿಯೇ ಇಲ್ಲ ಎನ್ನುತ್ತಾನೆ. ಈ ಸಹಮತ ಅನಧಿಕೃತ ಸಹಮತ ಎಂದೂ ಇನ್ನೊಬ್ಬ ಹೇಳುತ್ತಾನೆ" ಎಂದಿದ್ದಾರೆ. ಕಾಂಗ್ರೆಸ್‌ಮತ್ತು ಎಡಪಕ್ಷಗಳು ಮಮತಾ ಬ್ಯಾನರ್ಜಿ ಮತ್ತು ಮೋದಿ ಒಂದೇ ನಾಣ್ಯದ ಎರಡು ಮುಖಗಳೆಂದು ಟೀಕಿಸಿರುವುದನ್ನು ಪ್ರತಿಯಾಗಿ ಬ್ರಯಾನ್ ಮಾರ್ಕಿಸ್ಟ್ ಕಮ್ಯುನಿಸ್ಟ್ ಪಕ್ಷದ ಪ್ರಧಾನಕಾರ್ಯದರ್ಶಿ ಸೀತಾರಾಂ ಯಚೂರಿ,ಬಿಜೆಪಿಯ ಸಂಸ್ಥಾಪಕ ಲಾಲ್‌ಕೃಷ್ಣ ಅಡ್ವಾಣಿ ಜೊತೆಗಿರುವ ಫೋಟೊವನ್ನು ಮತ್ತು ಪ್ರಕಾಶ್ ಕಾರಟ್ ಗೃಹಸಚಿವ ರಾಜನಾಥ್ ಸಿಂಗ್‌ರಜೊತೆ ಇರುವ ಫೋಟೊವನ್ನು ಪ್ರದರ್ಶಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News