ಬಿಹಾರ: ಸಾಲಸಂದಾಯಕ್ಕೆ ಭಗವಾನ್ ಹನುಮಾನ್‌ಗೇ ನೋಟಿಸ್ ಕಳುಹಿಸಿದ ನಗರ ನಿಗಮ!

Update: 2016-04-24 12:38 GMT

ಅರಾ,ಎಪ್ರಿಲ್ 24: ಬಿಹಾರ್ ಅರಾ ಜಿಲ್ಲೆಯ ನಗರ ನಿಗಮ ಭಗವಾನ ಹನುಮಾನ್‌ನ್ನು ಸಾಲಗಾರ ಎಂದು ಘೋಷಿಸಿದೆ. 4.33 ಲಕ್ಷ ರೂಪಾಯಿ ಆಸ್ತಿ ತೆರಿಗೆ ಸಂದಾಯ ಮಾಡಲು ನೋಟಿಸ್ ನೀಡಿದೆ ಎಂದು ವರದಿಯಾಗಿದೆ. ವಿಷಯ ಬಹಿರಂಗವಾದ ಮೇಲೆ ನಿಗಮ ಆಡಳಿತ ಉಲ್ಟಾ ಹೊಡೆದಿದೆ. ಮೇಯರ್ ನೋಟಿಸ್ ಭಗವಾನ್ ಹನುಮಾನ್‌ಗೆ ಕಳುಹಿಸಲಾಗಿಲ್ಲ. ಬಡಾ ಹನುಮಾನ್ ಗಡ ಟ್ರಸ್ಟ್‌ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

 ವರದಿಯಾಗಿರುವ ಪ್ರಕಾರ ಬಿಹಾರದ ಅರಾ ಜಿಲ್ಲೆಯ ಬಡಿ ಮಿಠಿಯಾದಲ್ಲಿ ಹನುಮಾನ್ ಮಂದಿರ ಬಹಳ ಪ್ರಾಚೀನ ಮಂದಿರವಾಗಿದೆ. ಈ ಮಂದಿರದ ಬಳಿ ಹನುಮಾನ್‌ನ ಮೂರು ದೊಡ್ಡ ಹೋರ್ಡಿಂಗ್ ಹಾಕಲಾಗಿದೆ. ಈ ಹೋರ್ಡಿಂಗ್‌ನಲ್ಲಿ 4.33ಲಕ್ಷ ರೂಪಾಯಿ ತೆರಿಗೆಬಾಕಿ ಇದೆ ಎಂದು ಬರೆಯಲಾಗಿದೆ. ಅದರ ವಸೂಲಿಗಾಗಿ ಸೆಟೆದು ನಿಂತ ನಗರ ನಿಗಮ ಹನುಮಾನ್‌ಗೆ ನೋಟಿಸ್ ಕಳುಹಿಸುವ ಕೆಲಸಮಾಡಿದೆ.

ನಿಗಮದ ರಿಜಿಸ್ಟ್ರರ್‌ನಲ್ಲಿ ಸಾಲಗಾರ ಎಂದು ಬಡಿ ಮಿಠಿಯದ ಭಗವಾನ್ ಹನುಮಾನ್ ಎಂದು ದಾಖಲಾಗಿದೆ.ಆದ್ದರಿಂದ ನಿಗಮ ಅಧಿಕಾರಿಗಳು ಹನುಮಾನ್ ಸಾಲಗಾರ ಎಂದು ಘೋಷಿಸಿ ನೋಟಿಸ್ ಕಳುಹಿಸಿ 4.33 ಲಕ್ಷ ರೂಪಾಯಿ ಸಾಲವನ್ನು ತುಂಬಬೇಕೆಂದು ಹೇಳಿತೆನ್ನಲಾಗಿದೆ. ನಿಗಮದ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾಇದಕ್ಕಿಂತ ಮೊದಲು ಎರಡು ಸಲ ನೋಟಿಸ್ ಕಳುಹಿಸಲಾಗಿದೆ. ಆದರೆ ಸಾಲ ಪಾವತಿಸಿಲ್ಲ. ಮೂರನೆ ಸಲ ನಿಗಮ ನೋಟಿಸ್ ಕಳುಹಿಸಿ ಸಾಲಸಂದಾಯ ನಡೆಸದಿದ್ದರೆ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಹೋರ್ಡಿಂಗ್ ಹಾಕಿ ಸಾರ್ವಜನಿಕವಾಗಿ ಸಾಲಗಾರ ಎಂದು ತಿಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

ನಿಗಮ ಈ ನೋಟಿಸ್ ಕಳುಹಿಸಿದ ನಂತರ ಈ ವಿಚಾರ ಚರ್ಚೆಗೆ ತುತ್ತಾಗಿದ್ದು ನಿಗಮದ ಆಡಳಿತ ಸ್ಪಷ್ಟೀಕರಣ ಕೊಡಲು ಯತ್ನಿಸುತ್ತಿದೆ. ಮೇಯರ್ ಸುನೀಲ್ ಕುಮಾರ್ ನೋಟಿಸ್ ಭಗವಾನ್ ಹನುಮಾನ್‌ಗಲ್ಲ ಹನುಮಾನ್‌ಜಿ ಟ್ರಸ್ಟ್‌ಗೆ ಎಂದು ಹೇಳಿದ್ದಾರೆ.ಇದಕ್ಕಿಂತ ಮೊದಲು ಮಧ್ಯಪ್ರದೇಶದ ಭಿಂಡ್‌ನ ಬೇಗುಸರಾಯ್‌ನಲ್ಲಿಇಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ನಗರಪಾಲಿಕೆ ಅಲ್ಲಿಯೂ ಭಗವಾನ್ ಹನುಮಾನ್‌ಗೆ ನೋಟಿಸ್ ಜಾರಿಮಾಡಿ ಮಂದಿರವನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ಇಲ್ಲಿ ಹನುಮಾನ್ ವಿರುದ್ಧ ರಸ್ತೆಯನ್ನು ಆಕ್ರಮಿಸಿಕೊಂಡಿದ್ದಾನೆ ಎಂದು ನಗರಪಾಲಿಕೆ ಆರೋಪ ಹೊರಿಸಿತ್ತು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News