×
Ad

ಮಂಗಳೂರು: ಇಖ್ಲಾಸ್ ಇಂಟರ್‌ನ್ಯಾಷನಲ್ ನೂತನ ಕಚೇರಿ ಉದ್ಘಾಟನೆ

Update: 2016-04-24 20:03 IST

ಮಂಗಳೂರು, ಎ. 24: ಇಖ್ಲಾಸ್ ಇಂಟರ್‌ನ್ಯಾಷನಲ್ ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್ ಇದರ 10ನೆ ವಾರ್ಷಿಕದ ಸಂದರ್ಭದಲ್ಲಿ ಬೆಂದೂರ್‌ವೆಲ್ ಕಂಕನಾಡಿಯ ಕುನಿಲ್ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿ ಇಖ್ಲಾಸ್ ಇಂಟರ್‌ನ್ಯಾಷನಲ್ ನೂತನ ಕಚೇರಿ ಉದ್ಘಾಟನೆಗೊಂಡಿತು.

 ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ದುವಾದೊಂದಿಗೆ ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಎಪ್ರಿಲ್ 3ರಂದು ನೂತನ ಕಚೇಯ ಉದ್ಘಾಟನೆಯನ್ನು ನೇರಿವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಮೊದಿನ್ ಬಾವ, ಕಂಕನಾಡಿ ಮಸೀದಿಯ ಖತೀಬ್ ಹಾಜಿ ಇಸ್ಮಾಯೀಲ್, ಹೈದರ್ ಪರ್ತಿಪ್ಪಾಡಿ, ಶರೀಫ್, ಮಾಜಿ ಉಪ ಮೇಯರ್ ಸಲೀಂ, ಎಸ್.ಎಂ.ರಶೀದ್ ಹಾಜಿ ಮೊದಲಾದವರು ಉಪಸ್ಥಿತರಿದ್ದು, ಇಖ್ಲಾಸ್‌ನ ನೂತನ ಕಚೇರಿಗೆ ಶುಭ ಹಾರೈಸಿದರು. 2005ರಿಂದ ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿರು ರೀಗಲ್ ಪ್ಲಾಝಾ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಇಖ್ಲಾಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ಹಜ್ ಮತ್ತು ಉಮ್ರಾ ನೆರವೇರಿಸುವರಿಗೆ ಹೆಚ್ಚಿನ ಸೌಲಭ್ಯಗಳೊಂದಿಗೆ ಸೇವೆಯನ್ನು ಒದಗಿಸುತ್ತಿದೆ. ಅಂದು ಖಾಝಿಯರಾದ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ ಅವರು ಇದರ ಉದ್ಘಾಟನೆಯನ್ನು ನೆರವೇರಿಸಿದ್ದರು. ಅದೇ ವರ್ಷದಲ್ಲಿ ಸಂಸ್ಥೆಯ ವತಿಯಿಂದ ಮೊದಲ ಬಾರಿಗೆ ಉತ್ತಮ ಸೌಲಭ್ಯಗಳೊಂದಿಗೆ ಹಜ್ಜಾಜ್‌ಗಳಿಗೆ ಹಜ್ ನಿರ್ವಹಿಸಲು ಅನುವು ಮಾಡಿಕೊಡಲಾಯಿತು. ಹಜ್ ಮತ್ತು ಉಮ್ರಾ ನೆರವೇರಿಸುವವರಿಗೆ ಸಂಸ್ಥೆಯ ನೀಡುತ್ತಿರುವ ಸೇವೆಯಿಂದಾಗಿ ಸಂಸ್ಥೆಯು ಜನಮೆಚ್ಚುಗೆಯನ್ನು ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಕಂಕನಾಡಿಯಲ್ಲಿ ನೂತನವಾಗಿ ಇನ್ನೊಂದು ಕಚೇರಿಯನ್ನು ಪ್ರಾರಂಭಿಸುವುದಾಗಿ ಸಂಸ್ಥೆಯ ಮಾಲಕ ಎಂ.ಎಸ್.ಶಬ್ಬೀರ್ ಅಹ್ಮದ್ ತಿಳಿಸಿದ್ದಾರೆ.

ಮುಂಬೈಯ ಕುರ್ಲಾದಲ್ಲೂ ಸಂಸ್ಥೆಯ ಮುಖ್ಯ ಕಚೇರಿ ಇದ್ದು, ಅಲ್ಲಿಂದಲೂ ಹಜ್ಜಾಜ್‌ಗಳಿಗೆ ಉತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ. 2005ರಿಂದಲೇ ಸಂಸ್ಥೆಯಲ್ಲಿ ಹಜ್ಜಾಜ್‌ಗಳಿಗೆ ಸೇವೆಯನ್ನು ನೀಡುತ್ತಿರುವ ಹಿರಿಯ ಸಹೋದರ ಎಂ.ಎಸ್.ಅಬ್ದುಲ್ ಜಲೀಲ್ ಸಂಸ್ಥೆಯ ಪಾಲುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ 2016ನೆ ಸಾಲಿನ ಹಜ್ ಬುಕ್ಕಿಂಗ್ ಪ್ರಾರಂಭಗೊಂಡಿದೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News