ಕೋಟೆಕಾರು : ಶೇ. 67.27 ಮತದಾನ
ಉಳ್ಳಾಲ: ನೂತನವಾಗಿ ಅಸ್ತಿತ್ವಕ್ಕೆ ಬಂದ ದ.ಕ ಜಿಲ್ಲೆಯ ಕೋಟೆಕಾರು ಪಟ್ಟಣ ಪಂಚಾಯಿತಿಗೆ ಭಾನುವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ. 67.27 ಮತ ಚಲಾವಣೆ ನಡೆದಿದೆ.
ಬೆಳಿಗ್ಗೆ ಸರಿಯಾದ ಸಮಯದಲ್ಲಿ 16 ಸದಸ್ಯರ ಆಯ್ಕೆಗೆ 16 ಮತದಾನ ಕೇಂದ್ರಗಳಲ್ಲಿ ಆರಂಭಗೊಂಡ ಮತದಾನ ಮಂದಗತಿಯಲ್ಲಿ ಸಾಗಿತ್ತು. ಶೇ. 30 ರಷ್ಟು ಮಧ್ಯಾಹ್ನ ವೇಳೆ ಮತ ಚಲಾವಣೆ ನಡೆದಿತ್ತು. ಒಂದನೇ ವಾರ್ಡ್ ಕೋಟೆಕಾರು ಪಟ್ಟಣ ಪಂಚಾಯತ್ ಹಳೇ ಕಟ್ಟಡ, 2ನೇ ವಾರ್ಡ್ ಕೋಟೆಕಾರು ಪಟ್ಟಣ ಪಂಚಾಯತ್‌ನ ರಾಜೀವಗಾಂಧಿ ಕೇಂದ್ರ, 3ನೇ ವಾರ್ಡ್ ಮಾಡೂರು ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, 5 ಮತ್ತು 6ನೇ ವಾರ್ಡ್ ಬಗಂಬಿಲ ದ.ಕ.ಜಿ.ಪಂ. ಶಾಲೆ, 9 ಮತ್ತು 10ನೇ ವಾರ್ಡ್ ಮಾಡೂರು ದ.ಕ.ಜಿಲ್ಲಾ ಪಂಚಾಯತ್ ಶಾಲೆಗಳಲ್ಲಿ ಮಧ್ಯಾಹ್ನದವರೆಗೆ ಮತದಾರರು ಹೆಚ್ಚಿದ್ದರು. 4ನೇ ವಾರ್ಡ್ ಆಸಿಸಿ ಸೆಂಟ್ರಲ್ ಶಾಲೆ, 7 ಮತ್ತು 8ನೇ ವಾರ್ಡ್ ಬೀರಿ ಪ್ರೌಢಶಾಲೆ, 11 ಮತ್ತು 13ನೇ ವಾರ್ಡ್‌ಗೆ ಪಾನೀರು ಹಿ. ಪ್ರಾ. ಶಾಲೆ, 12ನೇ ವಾರ್ಡ್‌ಗೆ ಕಣಚೂರು ಪಿ.ಯು.ಕಾಲೇಜು,ಮತ್ತು 15ನೇ ವಾರ್ಡ್‌ಗೆ ಮರ್ಕಾರ್ ಹಿದಾಯತ್ ಪ್ರಾಥಮಿಕ ಶಾಲೆ ಮಧುಪಾಲ್, 16 ನೇ ವಾರ್ಡ್‌ಗೆ ಅಜ್ಜಿನಡ್ಕ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮತದಾರರು ಇಲ್ಲದೆ ಬಿಕೋ ಅನ್ನುತಿತ್ತು.