ಆನಂದ ಡೌನ್‌ಲೋಡ್ ಮಾಡುವ ಆ್ಯಪ್ ಅಲ್ಲ: ಪೋಪ್
Update: 2016-04-24 21:18 IST
ವ್ಯಾಟಿಕನ್ ಸಿಟಿ, ಎ. 24: ಆನಂದ ಎನ್ನುವುದು ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದಾದ ಆ್ಯಪ್ ಅಲ್ಲ ಎಂದು ಪೋಪ್ ಫ್ರಾನ್ಸಿಸ್ ಯುವಜನರಿಗೆ ಕರೆ ನೀಡಿದ್ದಾರೆ.
ಯುವಜನರಿಗಾಗಿಯೇ ಮೀಸಲಿರಿಸಲಾದ ರವಿವಾರದ ವಾರಾಂತ್ಯದ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಮಾತನಾಡುತ್ತಿದ್ದರು.
‘‘ನಿಮ್ಮ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದನ್ನು ಖರೀದಿಸಲಾಗಲಿ, ಮಾರಾಟ ಮಾಡಲಾಗಲಿ ಸಾಧ್ಯವಿಲ್ಲ. ಅದು ನೀವು ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡುವ ಅಪ್ಲಿಕೇಶನ್ ಅಲ್ಲ’’ ಎಂದರು.
ಸುಮಾರು 70,000 ಯುವಕರು ಪೋಪ್‌ರ ಮಾತುಗಳನ್ನು ಆಲಿಸಿದರು.