×
Ad

ಕ್ಯಾ.ಅಮರಿಂದರ್ ಸಿಂಗ್ ಕೆನಡಾ ಭೇಟಿ ರದ್ದು

Update: 2016-04-24 23:27 IST

ಹೊಸದಿಲ್ಲಿ,ಎ.24: ಮೂರು ದಿನಗಳ ನಾಟಕೀಯ ಬೆಳವಣಿಗೆಗಳ ಬಳಿಕ ಪಂಜಾಬಿನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಕ್ಯಾ.ಅಮರಿಂದರ್ ಸಿಂಗ್ ಅವರು ತನ್ನ ಏಳು ದಿನಗಳ ಕೆನಡಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಟೊರೆಂಟೊದ ನ್ಯಾಯಾಲಯದಲ್ಲಿ ಹಿಂಸೆಗೆ ಸಂಬಂಧಿಸಿದ ಪ್ರಕರಣವೊಂದನ್ನು ಎದುರಿಸುವ ಸಾಧ್ಯತೆ ಅವರ ಈ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ.

ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ಹಿಂಸೆಗೊಳಗಾಗಿದ್ದ ಕೆನಡಾ ನಿವಾಸಿಯೋರ್ವನ ಪರವಾಗಿ ಸಿಖ್ಸ್ ಫಾರ್ ಜಸ್ಟೀಸ್(ಎಸ್‌ಎಫ್‌ಜೆ) ಹೆಸರಿನ ಸಾಮಾಜಿಕ ಸಂಘಟನೆ ಈ ಪ್ರಕರಣವನ್ನು ದಾಖಲಿಸಿದೆ.
 ಎಸ್‌ಎಫ್‌ಜೆಯ ಕಾನೂನು ಹೋರಾಟವನ್ನು ಅಧಿಕೃತ ಹೇಳಿಕೆಯೊಂದರಲ್ಲಿ ಟೀಕಿಸಿರುವ ಸಿಂಗ್,ಭಾರತಕ್ಕೆ ಮುಜುಗರವನ್ನುಂಟು ಮಾಡಲು ಮತ್ತು ವಿಶ್ವದ ವಿವಿಧೆಡೆಗಳಲ್ಲಿಯಂತೆ ಭಾರತದಲ್ಲಿಯೂ ಮಾನವ ಹಕ್ಕು ಉಲ್ಲಂಘನೆಗಳು ಮಾಮೂಲಾಗಿವೆ ಎಂದು ಬಿಂಬಿಸಲು ಐಸಿಸ್‌ನಂತಹ ಭಾರತ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿ ಅದು ಕಾರ್ಯ ನಿರ್ವಹಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಭಾರತ ಸರಕಾರವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಕೆನಡಾ ಸರಕಾರದೊಂದಿಗೆ ಅತ್ಯುನ್ನತ ಮಟ್ಟದಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News