×
Ad

ಒಬ್ಬನ ಸಾವು; ಕಚೇರಿಗೆ ಬೆಂಕಿ

Update: 2016-04-24 23:31 IST

ಅಲಿಗಡ, ಎ.24: ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ರಾತ್ರೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯೊಂದರಲ್ಲಿ ಹಳೆ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ.

ಮುಮ್ತಾಝ್ ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬನಿಗೆ ಹಲ್ಲೆ ನಡೆಸಿ, ಆತನ ಕೊಠಡಿಗೆ ಬೆಂಕಿಯಿಟ್ಟ ಬಳಿಕ ಹಿಂಸಾಚಾರ ಆರಂಭವಾಯಿತೆಂದು ಅಲಿಗಡ ವಲಯದ ಹಿರಿಯ ಪೊಲೀಸ್ ಅಧಿಕಾರಿ ಗೋವಿಂದ ಅಗರ್ವಾಲ್ ತಿಳಿಸಿದ್ದಾರೆ.
ವಿದ್ಯಾರ್ಥಿ ದೂರು ದಾಖಲಿಸಲು ವಿವಿಯ ಶಿಸ್ತು ಪಾಲನಾಧಿಕಾರಿಯ ಕಚೇರಿಗೆ ಧಾವಿಸಿದನು. ಈ ಘಟನೆಯ ಸುದ್ದಿ ಹಬ್ಬುತ್ತಿದ್ದಂತೆಯೇ ಪರಸ್ಪರ ವಿರೋಧಿ ಗುಂಪುಗಳೆರಡರ ವಿದ್ಯಾರ್ಥಿಗಳು ಗುಂಪು ಸೇರಿದರು ಹಾಗೂ ಘರ್ಷಣೆ ಆರಂಭವಾಯಿತು.
ವಿದ್ಯಾರ್ಥಿಗಳ ಗುಂಪುಗಳು ಪರಸ್ಪರ ಗುಂಡು ಹಾರಾಟ ನಡೆಸುತ್ತಿದ್ದವು. ಶನಿವಾರ ರಾತ್ರಿ ಶಿಸ್ತು ಪಾಲನಾಧಿಕಾರಿಯ ಕಚೇರಿಯ ಬಳಿ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಲ್ಲಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಒಂದು ಜೀಪು ಹಾಗೂ ಹಲವು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಶಿಸ್ತು ಪಾಲನಾಧಿಕಾರಿಯ ಕಚೇರಿಯನ್ನೂ ಸುಟ್ಟಿದ್ದಾರೆ.
ಪರಿಸ್ಥಿತಿ ಸಾಮಾನ್ಯಕ್ಕೆ ಮರಳಿದ ಘಟನೆಯ ಬಗ್ಗೆ ತನಿಖೆಯೊಂದು ನಡೆಯುತ್ತಿದೆಯೆಂದು ಎಎಂಯುನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಹತ್‌ಅಬ್ರಾರ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಗಾಯಾಳುವನ್ನು ದಿಲ್ಲಿಯ ಗಂಗಾರಾಂ ಆಸ್ಪತ್ರೆಗೆ ವರ್ಗಾಯಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ರವಿವಾರ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆಯೊಂದು ನಡೆಯಲಿದ್ದ ಕಾರಣ ಕ್ಯಾಂಪಸ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಕ್ಷಿಪ್ರಕ್ರಿಯಾ ಪಡೆಯನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News