×
Ad

‘ಸತ್ಯಮೇವ ಜಯತೇ’ಯಿಂದ ಕುಡಿಯುವ ನೀರು ಪೂರೈಕೆ ಉದ್ಘಾಟನೆ

Update: 2016-04-24 23:48 IST


ಮಂಜೇಶ್ವರ, ಎ.24: ಆಧುನಿಕ ಸಂಪರ್ಕ ಮಾಧ್ಯಮಗಳ ಮೂಲಕ ಸೇವಾ ಚಟುವಟಿಕೆಯಂತಹ ನೂತನ ಪರಿಕಲ್ಪನೆಗೆ ಯುವ ಜನರು ಮನಮಾಡಿರುವುದು ಪ್ರಶಂಸನಾರ್ಹ. ವಾಟ್ಸ್‌ಪ್ ಗುಂಪೊಂದು ಟ್ರಸ್ಟ್ ಆಗಿ ಕಾರ್ಯಾಚರಿಸುತ್ತಾ ಸಾಮಾಜಿಕ ಶ್ರೇಯಸ್ಸಿಗೆ ಪ್ರಯತ್ನಿಸುತ್ತಿರುವುದು ಸ್ತುತ್ಯಾರ್ಹ ವೆಂದು ರಹ್ಮಾನ್ ಪಳ್ಳೆಕೂಡೆಲ್ ಅಭಿಪ್ರಾಯಪಟ್ಟರು. ಸತ್ಯಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಮಂಜೇಶ್ವರ ವಲಯದ ವತಿಯಿಂದ ಪೈವಳಿಕೆ ಸಮೀಪದ ಕಾಯರ್‌ಕಟ್ಟೆ ಲಾಲ್‌ಬಾಗ್ ಪರಿಸರದ ಬೊಳಂಗಳ ಮತ್ತು ಕಂಡತ್ತಾಡ್ ಎಂಬಲ್ಲಿಯ ಹಲವು ಕುಟುಂಬಗಳಿಗೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭ ಟ್ರಸ್ಟಿನ ಪದಾ ಧಿಕಾರಿಗಳಾದ ಅಜಿತ್‌ಎಂ.ಸಿ, ಆರಿಫ್ ಬೆದ್ರೋಡಿ, ರಿಚರ್ಡ್ ಡಿಸೋಜ, ಪೂವಪ್ಪಲಾಲ್‌ಬಾಗ್, ಜಯ ಕಜೆ, ವೆಂಕಪ್ಪ ಲಾಲ್‌ಬಾಗ್, ಉಮರ್ ಮಸಿಕುಮ್ಮೇರಿ, ಅಲಿ ಕಡೆಂಕೋಡಿ, ಮೊದು ಕಡೆಂಕೋಡಿ ಉಪಸ್ಥಿತರಿದ್ದರು. ಅಶ್ವಥ್ ಲಾಲ್‌ಬಾಗ್ ಸ್ವಾಗತಿಸಿದರು. ಖಲೀಲ್ ಚಿಪ್ಪಾರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News