ಕಾಪು ಪುರಸಭೆ ಚುನಾವಣೆ: ಶೇ.74.23 ಮತದಾನ
ಕಾಪು, ಎ.24: ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಪು, ಉಳಿಯಾರಗೋಳಿ, ಮಲ್ಲಾರು ಗಾಪಂಗಳನ್ನೊಳಗೊಂಡ ಕಾಪು ಪುರಸಭೆೆಯ ಪ್ರಥಮ ಚುನಾವಣೆ ರವಿವಾರ ಶಾಂತಿಯುತವಾಗಿ ನಡೆದಿದ್ದು, ಶೇ.74.23ರಷ್ಟು ಮತದಾನವಾಗಿದೆ.
ಒಟ್ಟು 23 ವಾರ್ಡ್‌ಗಳಿಗೆ 16,485 ಮತದಾರರಲ್ಲಿ 12,237 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಪೈಕಿ 5,437 ಪುರುಷರು ಹಾಗೂ 6,800 ಮಹಿಳಾ ಮತದಾರರು ಸೇರಿದ್ದಾರೆ. ಗುಜ್ಜಿ ವಾರ್ಡ್‌ನಲ್ಲಿ ಅತ್ಯಂತ ಹೆಚ್ಚು ಶೇ.81.83 ಹಾಗೂ ಮಂಗಲಪೇಟೆ ವಾರ್ಡ್‌ನಲ್ಲಿ ಅತ್ಯಂತ ಕಡಿಮೆ ಶೇ.65.39 ಮತದಾನವಾಗಿದೆ. ಕೈಪುಂಜಾಲ್ ವಾರ್ಡ್- ಶೇ.79.75(721ಮತದಾರರಲ್ಲಿ 575 ಮಂದಿ ಮತದಾನ), ಕೋತಲಕಟ್ಟೆ- ಶೇ.72.84(637ರಲ್ಲಿ 464), ಕರಾವಳಿ- ಶೇ.77.84(704ರಲ್ಲಿ 548), ಪೊಲಿಪುಗುಡ್ಡೆ- ಶೇ.79.27(463ರಲ್ಲಿ 367), ದಂಡತೀರ್ಥ- ಶೇ.77.88 (660ರಲ್ಲಿ 514), ಕಲ್ಯಾ-ಶೇ.74.25(703ರಲ್ಲಿ 522), ಭಾರತ್‌ನಗರ- ಶೇ.70.25(847ರಲ್ಲಿ 595), ಬೀಡುಬದಿ- ಶೇ.66.96(693ರಲ್ಲಿ 464), ಪೊಲಿಪು- ಶೇ.81.03(833ರಲ್ಲಿ 675), ಕಾಪು ಪೇಟೆ- ಶೇ.70.60(721ರಲ್ಲಿ 509), ಲೈಟ್‌ಹೌಸ್-ಶೇ.80.58 (999ರಲ್ಲಿ 805), ಕೊಪ್ಪಲಂಗಡಿ- ಶೇ.68.54(766ರಲ್ಲಿ 525), ತೊಟ್ಟಂ- ಶೇ.76.12(783ರಲ್ಲಿ 596), ದುಗನ್ ತೋಟ-ಶೇ.66.19(630ರಲ್ಲಿ 417), ಮಂಗಳಪೇಟೆ- ಶೇ.65.39(942ರಲ್ಲಿ 616), ಜನಾರ್ದನ ದೇವಸ್ಥಾನ- ಶೇ.72.15(675ರಲ್ಲಿ 487), ಬಡಗರಗುತ್ತು- ಶೇ.78.54 (755ರಲ್ಲಿ 593), ಕೊಂಬಗುಡ್ಡೆ-ಶೇ.73.74(811ರಲ್ಲಿ 598), ಜನರಲ್ ಶಾಲೆ- ಶೇ.73.83(684ರಲ್ಲಿ 505), ಗುಜ್ಜಿ- ಶೇ.81.83(589ರಲ್ಲಿ 482), ಗರಡಿ- ಶೇ.73.13(562ರಲ್ಲಿ 411), ಕುಡ್ತಿಮಾರ್- ಶೇ.74.40(539ರಲ್ಲಿ 401) ಹಾಗೂ ಅಹ್ಮದಿ ಮೊಹಲ್ಲಾ- ಶೇ.73.96(768ರಲ್ಲಿ 568) ಹಕ್ಕು ಚಲಾವಣೆಯಾಗಿದೆ.
ಬಿರುಸಿನ ಮತದಾನ: ಮತದಾರರು ಬೆಳಗ್ಗೆಯಿಂದ 11 ಗಂಟೆಯವರೆಗೆ ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು. ಈ ವೇಳೆ ಶೇ.40ರಷ್ಟು ಮತದಾನವಾಗಿದ್ದರೆ, ಮಧ್ಯಾಹ್ನದ ಬಳಿಕ ಸ್ವಲ್ಪನಿಧಾನವಾಗಿತ್ತು. ಸಂಜೆ 4ರ ವೇಳೆಗೆ ಮತ್ತೆ ಬಿರುಸುಗೊಂಡಿತು. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಎಲ್ಲ 23 ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದು, ಜೆಡಿಎಸ್ 4, ಎಸ್‌ಡಿಪಿಐ 5 ಮತ್ತು ಪಕ್ಷೇತರರು 3 ವಾರ್ಡ್‌ಗಳಲ್ಲಿ ಕಣದಲ್ಲಿದ್ದು, ಒಟ್ಟು 35 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. 96 ವರ್ಷದ ಅಂಗರ ಕರ್ಕೇರ ತನ್ನ ಸೊಸೆಯೊಂದಿಗೆ ಮತದಾನ ಕೇಂದ್ರಕ್ಕೆ ಬಂದು ಮತದಾನಗೈದರು. 23 ವಾರ್ಡ್‌ಗಳಲ್ಲಿ 11 ಸೂಕ್ಷ್ಮಹಾಗೂ 12 ಸಾಮಾನ್ಯ ಮತಗಟ್ಟೆಗಳಿದ್ದು, ಎಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಎಲ್ಲೆಡೆ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪ ಡಿಸಲಾಗಿತ್ತು ಎಂದು ಕಾಪು ವೃತ್ತ ನಿರೀಕ್ಷಕ ಸುನೀಲ್‌ನಾಯ್ಕ್ ತಿಳಿಸಿದ್ದಾರೆ.