12 ವರ್ಷದ ಫೆಲೆಸ್ತೀನ್ ಬಾಲಕಿಯನ್ನು ಬಿಡುಗಡೆಗೊಳಿಸಿದ ಇಸ್ರೇಲ್
Update: 2016-04-25 11:18 IST
ಜೆರುಸಲೇಂ, ಎಪ್ರಿಲ್ 25: ಜೈಲೊಳಗೆ ಇರಿಸಿದ್ದ ಹನ್ನೆರಡು ವರ್ಷದ ಫೆಲೆಸ್ತೀನಿ ಬಾಲಕಿಯನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ. ಎರಡೂವರೆ ವರ್ಷದಿಂದ ಬಂಧನದಲ್ಲಿದ್ದ ದಿಮ ಅಲ್ ವಾವಿಕ್ ಬಿಡುಗೊಂಡ ಬಾಲಕಿಯಾಗಿದ್ದು.ಈ ಬಾಲಕಿಯನ್ನು ಇಸ್ರೇಲ್ ಮಾನವಹತ್ಯೆ ಆರೋಪ ಹೊರಿಸಿ ಜೈಲಿಗಟ್ಟಿತ್ತು. ಜೈಲಿನಲ್ಲದ್ದ ಅತ್ಯಂತ ಕಡಿಮೆ ವಯಸ್ಸಿನ ಕೈದಿ ವಾವಿಕ್ ಆಗಿದ್ದಳು. ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಜೈಲಿಗೆ ಹಾಕಬಾರದೆಂಬ ಕಾನೂನನ್ನು ಗಾಳಿಗೆ ತೂರಿ ಇಸ್ರೇಲ್ ಈ ಎಳೆಯ ಬಾಲಕಿಗೆ ಶಿಕ್ಷೆ ವಿಧಿಸಿತ್ತು. ಬಂಧಿಸಿ ಕರೆದೊಯ್ಯುವಾಗ ಅವಳನ್ನು ಇಸ್ರೇಲ್ ಪೊಲೀಸ್ ಕೊಂದು ಹಾಕಲಿದೆ ಎಂದು ಅವಳ ತಾಯಿ ಹೆದರಿಕೆ ಪ್ರಕಟಿಸಿದ್ದರು. ಬಹಳಷ್ಟು ನಿಯಮಗಳನ್ನು ದಾಟಿ ಈ ತಾಯಿ ಕಳೆದ ತಿಂಗಳು ಮಗಳನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ಈಗ ಇಸ್ರೇಲ್ ಜೈಲಿನಲ್ಲಿ 7,000 ಫೆಲೆಸ್ತೀನಿಯರು ಜೈಲಿನಲ್ಲಿದ್ದಾರೆ. ಇವರಲ್ಲಿ 440 ಮಕ್ಕಳೂ ಸೇರಿದ್ದಾರೆಂದು ವರದಿಗಳು ತಿಳಿಸಿವೆ.