ಕುಂಭಮೇಳದಲ್ಲಿ ಖಾಕಿ ಮೇಲೆ ಕಾವಿ ದಾಳಿ
ಉಜ್ಜೈನಿ, ಎಪ್ರಿಲ್ 25: ಸಿಂಹಸ್ತ ಕುಂಭಮೇಳದಲ್ಲಿ ಕಾವಿಧಾರಿ ಸನ್ಯಾಸಿಗಳ ಒಂದು ವಿಭಾಗ ಪೊಲೀಸರ ಮೇಲೆ ದಾಳಿ ಎಸಗಿದ್ದಾರೆ ಎಂದು ವರದಿಯಾಗಿದೆ. ಮಧ್ಯಪ್ರದೇಶದಲ್ಲಿ ರವಿವಾರ ನಡೆದಿದ್ದ ಮೇಳದ ವೇಳೆ ಜನ ಅಖಾರ ವಿಭಾಗಕ್ಕೆ ಸೇರಿದ್ದ ಸನ್ಯಾಸಿಗಳು ಪೊಲೀಸರ ವಿರುದ್ಧ ಘರ್ಷಣೆಗಿಳಿದರು ಎನ್ನಲಾಗಿದೆ. ಮೇಳದಲ್ಲಿ ತಮ್ಮ ಕ್ಯಾಂಪ್‌ನಲ್ಲಿ ಕಳ್ಳತನ ನಡೆಯುತ್ತಿರುವುದರ ಕುರಿತು ಇವರು ದೂರು ನೀಡಿದರೆಂದು, ಕಳ್ಳರೆಂದು ಅವರು ಹಿಡಿದವರನ್ನು ಪೊಲೀಸರು ಸುಮ್ಮನೆ ಬಿಟ್ಟು ಬಿಟ್ಟಿದ್ದಾರೆ ಎಂದೂ ವರದಿಯಾಗಿದೆ. ಇದರ ಕುರಿತು ಒಂದು ವಿಭಾಗ ಸನ್ಯಾಸಿಗಳು ಉಜ್ಜೈನಿಯಲ್ಲಿ ಪ್ರತಿಭಟನೆ ನಡೆಸಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದು ಪೊಲೀಸರ ಮೇಲೇ ಕೈ ಮಾಡಿದರು ಎನ್ನಲಾಗಿದೆ.
ಶನಿವಾರ ರಾತ್ರಿ ನಡೆದ ಘೋಷಾಯಾತ್ರೆಯ ನಡುವೆ ಸನ್ಯಾಸಿಗಳ ವಿರುದ್ಧ ಎರಡು ಕಡೆಗಳಲ್ಲಿ ದಾಳಿಯಾಗಿದ್ದು ಚೂಪಾದ ಆಯುಧಗಳಿಂದ ಗಾಯಗೊಳಿಸಿದ್ದರಿಂದ ಓರ್ವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಎಪ್ರಿಲ್ 22ಕ್ಕೆ ಆರಂಭವಾದ ಕುಂಭಮೇಳ ಮೇ 21ಕ್ಕೆ ಕೊನೆಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ.