ಪುತ್ತೂರು: ಮಹಿಳೆಗೆ ಹಲ್ಲೆ
Update: 2016-04-25 18:02 IST
ಪುತ್ತೂರು: ಮಹಿಳೆಯೊಬ್ಬರ ಮೇಲೆ ಆಕೆಯ ಅತ್ತೆ ಮತ್ತು ಮೈದುನ ಹಲ್ಲೆ ನಡೆಸಿರುವ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿನ ಗ್ರಾಮದ ಚೆನ್ನಾವರ ಎಂಬಲ್ಲಿ ನಡೆದಿದೆ. ಚೆನ್ನಾವರ ನಿವಾಸಿ ನಿವೇದಿತಾ ಹಲ್ಲೆಗೊಳಗಾದ ಮಹಿಳೆ. ತನ್ನ ಪತಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಅತ್ತೆ ರೇವತಿ ಮತ್ತು ಮೈದುನ ಚಂದ್ರಹಾಸ ಅವರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಾಳು ನಿವೇದಿತಾ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.