×
Ad

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಝಾಕ್ ನಾಮಪತ್ರ ಸಲ್ಲಿಕೆ

Update: 2016-04-25 18:44 IST

ಮಂಜೇಶ್ವರ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಹಾಲಿ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಅವರು ಸೋಮವಾರ ಬೆಳಗ್ಗೆ ಡೆಪ್ಯೂಟಿ ಕಲೆಕ್ಟರ್ ಸಿ.ಜಯನ್ ಅವರಿಗೆ ನಾಮಪತ್ರ ಸಲ್ಲಿಸಿದರು.

  ಅಭ್ಯರ್ಥಿ ಪಿ.ಬಿ.ಅಬ್ದುಲ್‌ರಜಾಕ್ ಅವರೊಂದಿಗೆ ತುಳು ಅಕಾಡೆಮಿ ಅಧ್ಯಕ್ಷ ಸುಬ್ಬಯ್ಯ ರೈ, ಅಶ್ರಫಲಿ ಮೊದಲಾದವರಿದ್ದರು.

  ಮುಸ್ಲಿಂ ಲೀಗ್ ಅಭ್ಯರ್ಥಿ ಎನ್.ಎ.ನೆಲ್ಲಿಕುನ್ನು ನಾಮಪತ್ರ ಸಲ್ಲಿಕೆ

 ಕಾಸರಗೋಡು ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಹಾಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಯೋಜನಾಧಿಕಾರಿ ಪಿ.ಸಾಜಿ ಅವರಿಗೆ ನಾಮಪತ್ರ ಸಲ್ಲಿಸಿದರು.

  ಎನ್.ಎ.ನೆಲ್ಲಿಕುನ್ನು ಅವರೊಂದಿಗೆ ಮಾಜಿ ಸಚಿವರಾದ ಸಿ.ಟಿ.ಅಹಮ್ಮದಾಲಿ, ಚೆರ್ಕಳಂ ಅಬ್ದುಲ್ಲ, ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಟಿ.ಇ.ಅಬ್ದುಲ್ಲ ಮೊದಲಾದವರಿದ್ದರು.

 ಕಾಸರಗೋಡು ಜಿಲ್ಲಾ ಮುಸ್ಲಿಂ ಲೀಗ್ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಸಾಗಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಾಯಿತು.

   ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಕುಞ್ಞೆಕಣ್ಣನ್ ನಾಮ ಪತ್ರಿಕೆ ಸಲ್ಲಿಕೆ

 ಮಂಜೇಶ್ವರ ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಕುಂಞಿಕಣ್ಣನ್ ಸೋಮವಾರ ಬೆಳಗ್ಗೆ ಡೆಪ್ಯೂಟಿ ಕಲೆಕ್ಟರ್ ಇ.ಜೆ.ಗ್ರೇಸಿ ಅವರಿಗೆ ನಾಮಪತ್ರ ಸಲ್ಲಿಸಿದರು.

   ಜೊತೆಯಲ್ಲಿ ಯುಡಿಎಫ್ ನೇತಾರರಾದ ಕೆ.ವೆಳ್ತಂಬು, ವಿ.ಕೆ.ಪಿ.ಹಮೀದಾಲಿ, ಶ್ರೀಧರನ್ ಮಾಸ್ತರ್ ಕೆ, ವಿ.ಕೆ.ಬಾವ, ಕೆ.ಕುಂಞಿಕೃಷ್ಣನ್, ಕಣ್ಣೂರು ಡಿಸಿಸಿ ಉಪಾಧ್ಯಕ್ಷ ವಿ.ಎನ್.ಎರಿಪುರಂ ಲತೀಫ್ ನೀಲಗಿರಿ, ಕೇಶವಪ್ರಸಾದ್ ನಾಣಿತ್ತಿಲು, ಸೋಮಶೇಖರ ಜೆ.ಎಸ್. ಮೊದಲಾದವರಿದ್ದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಲಾಯಿತು.

ಸಿ.ಪಿ.ಎಂ. ಅಭ್ಯರ್ಥಿ ಕುಞ್ಞೆರಾಮನ್ ನಾಮಪತ್ರ ಸಲ್ಲಿಕೆ 

ಮಂಜೇಶ್ವರ ಸಿ.ಪಿ.ಎಂ. ಅಭ್ಯರ್ಥಿ ಕೆ.ಕುಂಞಿರಾಮನ್ ಸೋಮವಾರ ನಾಮಪತ್ರ ಸಲ್ಲಿಸಿದರು.

 ಉದುಮ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಕೆ.ಕುಂಞಿರಾಮನ್ ಡೆಪ್ಯೂಟಿ ಕಲೆಕ್ಟರ್ ಬಿ.ಅಬ್ದುಲ್ ನಾಸರ್ ಅವರಿಗೆ ನಾಮಪತ್ರ ಸಲ್ಲಿಸಿದರು.

 ವಿದ್ಯಾನಗರದ ಸಿಪಿಎಂ ಜಿಲ್ಲಾ ಕಾರ್ಯಾಲಯ ಎಕೆಜಿ ಮಂದಿರದಿಂದ ಎಡರಂಗ ಮುಖಂಡರು ಮತ್ತು ಕಾರ್ಯಕರ್ತರು ಸಹಿತ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ನಾಮ ಪತ್ರ ಸಲ್ಲಿಕೆಯ ಸಂದಭರ್ದಲ್ಲಿ ಸಂಸದ ಪಿ.ಕರುಣಾಕರನ್, ಎಡರಂಗ ಸಂಚಾಲಕ ಪಿ.ರಾಘವನ್, ಮುಖಂಡರಾದ ಟಿ.ಕೆ.ರಾಜನ್, ಟಿ.ಕೃಷ್ಣನ್, ಅಸೀಸ್ ಕಡಪ್ಪುರ, ಮೊದೀನ್ ಕುಂಞಿ ಕಳನಾಡು, ಪಿ.ಬಿ.ಅಹಮ್ಮದ್, ಸಿಜಿ ಮ್ಯಾಥ್ಯೂ, ಕೆ.ವಿ.ಕುಂಞಿರಾಮನ್, ಕೆ.ಎ.ಮುಹಮ್ಮದ್ ಹನೀಫ್, ನ್ಯಾಯವಾದಿ ಎ.ಜಿ.ನಾಯರ್, ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ಯಾಮಲಾದೇವಿ, ಪಿ.ಆರ್.ಅಮ್ಮಣ್ಣಾಯ, ಅಜಿತ್ ಕುಮಾರ್ ಅಸಾದ್, ಸುಬೈರ್ ಪಡ್ಪು, ಪಿ.ಎಂ.ಎ.ಕರೀಂ ಮೊದಲಾದವರಿದ್ದರು. ಡಮ್ಮಿ ಅಭ್ಯರ್ಥಿಗಳನ್ನು ಮುಂದೆ ನಿಧರ್ರಿಸಲಾಗುವುದು ಎಂದು ಸಂಬಂಧಪಟ್ಟವರು ಈ ಸಂದರ್ಭ ತಿಳಿಸಿದರು.

   ಐ.ಎನ್.ಎಲ್ ಅಭ್ಯರ್ಥಿ ಡಾ.ಎ.ಎ.ಅಮೀನ್ ನಾಮಪತ್ರ ಸಲ್ಲಿಕೆ

ಮಂಜೇಶ್ವರ ಐ.ಎನ್.ಎಲ್. ಅಭ್ಯರ್ಥಿ ಡಾ.ಎ.ಎ.ಅಮೀನ್ ಸೋಮವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದರು.

 ಕಾಸರಗೋಡು ವಿಧಾನಸಭಾ ಕ್ಷೇತ್ರದ ಎಡರಂಗದ ಐಎನ್‌ಎಲ್ ಅಭ್ಯರ್ಥಿ ಡಾಎ.ಎ.ಅಮೀನ್ ಯೋಜನಾಧಿಕಾರಿ ಪಿ.ಸಜಿ ಅವರಿಗೆ ನಾಮಪತ್ರ ಸಲ್ಲಿಸಿದರು.

  ವಿದ್ಯಾನಗರದ ಸಿಪಿಎಂ ಜಿಲ್ಲಾ ಕಾರ್ಯಾಲಯ ಎಕೆಜಿ ಮಂದಿರದಿಂದ ಎಡರಂಗ ಮುಖಂಡರು ಮತ್ತು ಕಾರ್ಯಕರ್ತರು ಸಹಿತ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ನಾಮ ಪತ್ರ ಸಲ್ಲಿಕೆಯ ಸಂದಭರ್ದಲ್ಲಿ ಸಂಸದ ಪಿ.ಕರುಣಾಕರನ್, ಎಡರಂಗ ಸಂಚಾಲಕ ಪಿ.ರಾಘವನ್, ಮುಖಂಡರಾದ ಟಿ.ಕೆ.ರಾಜನ್, ಟಿ.ಕೃಷ್ಣನ್, ಅಸೀಸ್ ಕಡಪ್ಪುರ, ಮೊದೀನ್ ಕುಂಞಿ ಕಳನಾಡು, ಪಿ.ಬಿ.ಅಹಮ್ಮದ್, ಸಿಜಿ ಮ್ಯಾಥ್ಯೂ, ಕೆ.ವಿ.ಕುಂಞಿರಾಮನ್, ಕೆ.ಎ.ಮುಹಮ್ಮದ್ ಹನೀಫ್, ನ್ಯಾಯವಾದಿ ಎ.ಜಿ.ನಾಯರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾದೇವಿ, ಪಿ.ಆರ್.ಅಮ್ಮಣ್ಣಾಯ, ಅಜಿತ್ ಕುಮಾರ್ ಅಸಾದ್, ಸುಬೈರ್ ಪಡ್ಪು, ಪಿ.ಎಂ.ಎ.ಕರೀಂ ಮೊದಲಾದವರಿದ್ದರು. ಡಮ್ಮಿ ಅಭ್ಯರ್ಥಿಗಳನ್ನು ಮುಂದೆ ನಿರ್ಧಯಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News