×
Ad

ಎ.27 ರಂದು ಮೂಳೂರು ಮರ್ಕಝ್‌ನಲ್ಲಿ ಡಿಕೆಎಸ್ಸಿ ಗಲ್ಫ್ ಮೀಟ್

Update: 2016-04-25 21:33 IST

ಉಡುಪಿ, ಎ.25: ಡಿಕೆಎಸ್ಸಿ ಸಂಸ್ಥೆಯ 20ನೆ ವಾರ್ಷಿಕದ ಅಂಗವಾಗಿ ಕಾರ್ಯಕರ್ತರ ಗಲ್ಫ್‌ಮೀಟ್ ಮೂಳೂರು ಮರ್ಕಝ್ ತಅಲೀಮಿಲ್ ಇಹ್ಸಾನ್‌ನ ಕ್ಯಾಂಪಸ್‌ನಲ್ಲಿ ಎ.27ರಂದು ನಡೆಯಲಿದೆ.

ಲುಹರ್ ನಮಾಝ್‌ನ ನಂತರ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಸ್ಸೈಯದ್ ಕೆ.ಎಸ್.ಆಟಕೋಯ ತಂಙಳ್ ವಹಿಸಲಿದ್ದು, ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ ಅರೆಮೆಕ್ಸ್ ಉದ್ಘಾಟಿಸಲಿದ್ದಾರೆ.

20ನೆ ವಾರ್ಷಿಕದ ಸ್ವಾಗತ ಸಮಿತಿಯ ಚೇರ್‌ಮೆನ್ ಮುಮ್ತಾಝ್ ಅಲಿ ಕೃಷ್ಣಾಪುರ, ಕನ್ವೀನರ್ ಬದ್ರುದ್ದೀನ್ ಬಜ್ಪೆ, ಖಜಾಂಚಿ ಎಚ್.ಬಿ.ಮುಹಮ್ಮದ್ ಹಾಜಿ ಕನ್ನಂಗಾರ್ ಮತ್ತಿತರರರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 9845413529 ಅಥವಾ 9035888040 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News