×
Ad

ಮಲಾರ್: ಆಂಡ್ ನೇರ್ಚೆ, ಮತಪ್ರವಚನ

Update: 2016-04-25 23:29 IST


ಮಂಗಳೂರು, ಎ.25: ಹರೇಕಳ ಗ್ರಾಮದ ಮಲಾರ್ ಹರೇಕಳದ ಮುಹ್ಯಿಯುದ್ದೀನ್ ಜುಮಾ ಮಸೀದಿಯ ಆಶ್ರಯದಲ್ಲಿ ಅಶೈಖ್ ಯೂಸುಫ್ ಸಿದ್ದೀಖ್ ವಲಿಯುಲ್ಲಾಹಿರವರ ಆಂಡ್ ನೇರ್ಚೆ, ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಮರ್‌ಹೂಮ್ ಪಳ್ಳಿಯಬ್ಬ ಹಾಜಿ ವೇದಿಕೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ‘ಇಸ್ಲಾಮ್ ಎಂಬ ಶಬ್ದದ ಅರ್ಥ ಶಾಂತಿ ಎಂದಾಗಿದೆ. ಪ್ರವಾದಿವರ್ಯರ ಜೀವನ ಸಂದೇಶವನ್ನು ಅನುಸರಿಸಿ ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದರು.
 ಅಬೂಬಕರ್ ಸಿದ್ದೀಕ್ ಅಝ್‌ಹರಿ ಪಯ್ಯನ್ನೂರು, ಖತೀಬ್ ಅಬೂಬಕರ್ ಸಿದ್ದೀಕ್ ಫೈಝಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎನ್.ಎಸ್. ಕರೀಂ, ಅಬ್ದುಲ್ ಮಜೀದ್ ರಾಜ್‌ಕಮಲ್, ಕೆ.ಎಚ್.ಮುಹಮ್ಮದ್‌ಇರ್ಫಾನ್ ಮೌಲವಿ, ಮುಹಮ್ಮದ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಮಲಾರ್ ಮಸೀದಿಯ ಉಪಾಧ್ಯಕ್ಷ ಮುಹಮ್ಮದ್ ಮುಸ್ತಫಾ ಸ್ವಾಗತಿಸಿದರು. ಇಸ್ಮಾಯೀಲ್ ಮಲಾರ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News