ಕೊಳಚಿ ಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ 7ನೆ ವಾರ್ಷಿಕೋತ್ಸವ
ಮುಲ್ಕಿ, ಎ.26: ದೈವ ದೇವರುಗಳ ಆರಾಧನೆಯಿಂದಾಗಿ ತುಳು ನಾಡು ಸಂಪದ್ಭರಿತವಾಗಿದ್ದು ಧಾರ್ಮಿಕ ಕೇಂದ್ರಗಳಲ್ಲಿ ಸಾಂಸ್ಕ್ರತಿಕ,ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಮುಲ್ಕಿಯ ಕೊಳಚಿಕಂಬಳದ ಶ್ರೀ ಜಾರಂದಾಯ ದೈವಸ್ಥಾನದ ವಠಾರದಲ್ಲಿ ಜರಗಿದ ಕೊಳಚಿ ಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ ಏಳನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಬಿಲ್ಲವಾಸ್ ದುಬೈ ನ ಅಧ್ಯಕ್ಷ ಸತೀಶ್ ಪೂಜಾರಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಲ್ಕಿಯ ಬಪ್ಪನಾಡಿನ ಶ್ರೀ ದುಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ಕೃಷ್ಣದಾಸ್ ಭಟ್,ಸಮಾಜ ಸೇವಕ ಆನಂದ ದೇವಾಡಿಗ ಮುಲ್ಕಿ ಮತ್ತು ಯೋಗ ಗುರು ಕೆಂಚನಕೆರೆಯ ಯೋಗೋಪಾಸನ ಕೇಂದ್ರದ ಯೋಗ ಗುರು ಜಯ ಎಂ.ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಕೊಳಚಿಕಂಬಳ ಸಾನದ ಮನೆ ದಿ.ಹರಿಯಪ್ಪ ಕೋಟ್ಯಾನ್ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.ಹಾಗೂ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಷ್ಕರಿಸಲಾಯಿತು.
ಕ್ಲಬ್ನ ಸದಸ್ಯರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಮೂಲ್ಕಿಯ ಕೊಳಚಿಕಂಬಳದಲ್ಲಿ ಹುಟ್ಟಿ ಬೆಳೆದು ಓಸಿಯನ್ ಕನ್ಸ್ ಟ್ರಕ್ಸನ್ ಮೂಲಕ ಶಿರಾಟಿ ಘಾಟ್ ನ ಕಾಮಗಾರಿ ನಿರ್ವಹಿಸಿದ ಯುವ ಉದ್ಯಮಿ ಹಾಗೂ ಗುತ್ತಿಗೆದಾರ ಇನಾಯತ್ ಆಲಿ ಮುಲ್ಕಿಯವರನ್ನು ಗೌರವಿಸಲಾಯಿತು. ಉದ್ಯಮಿ ಜಯ ಕೆ . ಶೆಟ್ಟಿ ಮುಂಬೈ, ಮುಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ, ಸದಸ್ಯ ಪುತ್ತು ಬಾವು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯೂತ್ ಕ್ಲಬ್ನ ಅಧ್ಯಕ್ಷ ಕೃಷ್ಣ ಸುವರ್ಣ, ಮಹಿಳಾ ಮಂಡಳಿಯ ಅಧ್ಯಕ್ಷೆ ಲತಾ ಶೇಖರ್, ಕೊಳಚಿಕಂಬಳ ಶ್ರೀ ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಸುವರ್ಣ, ಸಾನದ ಮನೆ ಕೃಷ್ಣ ಆರ್ ಕೋಟ್ಯಾನ್, ಉಪಸ್ತಿತರಿದ್ದರು.
ಯತಿನ್ ಸ್ವಾಗತಿಸಿದರು. ಹರಿಶ್ಚಂದ್ರ ಪಿ ಸಾಲ್ಯಾನ್ ಪ್ರಸ್ತಾವನೆಗೈದರು, ಕರಿಷ್ಮ ವಂದಿಸಿದರು. ದಿನೇಶ್ ಕೊಲ್ನಾಡ್ ನಿರೂಪಿಸಿದರು.