ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಆಹಾರ ತಯಾರಿಸಬೇಡಿ ಎಂದ ಬಿಹಾರ ವಿಪತ್ತು ನಿರ್ವಹಣಾ ಇಲಾಖೆ!
ಪಾಟ್ನ, ಎಪ್ರಿಲ್ 26: ಬಿಹಾರ ಸರಕಾರದ ವಿಪತ್ತು ನಿರ್ವಹಣಾ ವಿಭಾಗ ಗ್ರಾಮ ನಿವಾಸಿಗಳಿಗೆ ಬೆಳಗ್ಗೆ ಒಂಬತ್ತರ ನಂತರ ಸಂಜೆ ಆರು ಗಂಟೆಯವರೆಗೆ ಊಟಾಹಾರ ತಯಾರಿಸಬೇಡಿ ಎಂಬ ಸಲಹೆ ನೀಡಿರುವುದಾಗಿ ಬಿಬಿಸಿ ವರದಿಮಾಡಿದೆ. ಜೊತೆಗೆ ಜೋಳದ ಭೂಸ, ಗರಿಗಳನ್ನು ಉರಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಬಿಸಿಲಿನ ಪರಿಣಾಮ ಬಿಹಾರದ ಅಲ್ಲಲ್ಲಿ ಬೆಂಕಿಹೊತ್ತಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿರುವುದರಿಂದ ಈ ನಿಷೇಧ ಹೇರಲಾಗಿದೆ. ಮುಖ್ಯಮಂತ್ರಿ ನಿರ್ದೇಶನದಲ್ಲಿ ಈ ಇಲಾಖೆ ಸೋಮವಾರ ಒಂದು ಸಲಹೆಯನ್ನು ನೀಡಿದ್ದುಇದನ್ನು ಉಲ್ಲಂಘಿಸಿ ಬೆಂಕಿ ಹೊತ್ತಿದರೆ ಅಂತವರ ವಿರುದ್ಧ ಆಪತ್ತು ನಿರ್ವಹಣಾ ಅಧಿನಿಯಮದ ಪ್ರಕಾರ ಕ್ರಮ ಜರಗಿಸಲಾಗುವುದು. ಆಪತ್ತು ನಿರ್ವಹಣಾ ವಿಭಾಗದ ಪ್ರಧಾನ ಕಾರ್ಯದರ್ಶಿ ಬೆಂಕಿ ಹಿಡಿದ ಘಟನೆಗಳ ಸಮೀಕ್ಷೆಯಲ್ಲಿ ಹೆಚ್ಚಿನ ಘಟನೆಗಳು ಒಲೆಯ ಕಾರಣದಿಂದ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ. ಒಲೆಯಿಂದ ಹಾರಿದ ಕಿಡಿಗಳಿಂದ ಹೀಗಾದ್ದರಿಂದ ಇಂಥ ಸಲಹೆಯನ್ನು ಜನರಿಗೆ ನೀಡಬೇಕಾಯಿತು ಎಂದು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಅವರ ಪ್ರಕಾರ ಸಮೀಕ್ಷೆಯಲ್ಲಿ ಹವನ ಮತ್ತು ಗದ್ದೆಯಲ್ಲಿ ಗೋಧಿಯ ಭೂಸಾಕ್ಕೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿ ದುರ್ಘಟನೆಗಳು ನಡೆದಿವೆ ಎಂದು ಗೊತ್ತಾಗಿದೆ.
ಔರಂಗಾಬಾದ್ ಜಿಲ್ಲೆಯಲ್ಲಿ ಎಪ್ರಿಲ್ 22ರಂದು 13 ಮಂದಿ ಸಾಯಲು ಕಾರಣವಾದ ಬೆಂಕಿ ದುರ್ಘಟನೆ ಹವನದ ಕಿಡಿಯಿಂದಾಗಿದೆ. ಅಪತ್ತು ನಿರ್ವಹಣಾ ಇಲಾಖೆ ಪ್ರತಿ ಜಿಲ್ಲೆಗೂ ಈ ಸಲಹೆಯ ಪ್ರಚಾರ ಪ್ರಸಾರ ಮಾಡಲು ತಿಳಿಸಿದೆ. ಅದರ ಪ್ರಕಾರ ಪ್ರದೇಶದಲ್ಲಿ ಕಳೆದ ಒಂದು ತಿಂಗಳಲ್ಲಿ ಬೆಂಕಿದುರ್ಘಟನೆಯಲ್ಲಿ 67 ಮಂದಿ ಮೃತರಾಗಿದ್ದಾರೆ.