×
Ad

ಸಲ್ಮಾನ್ ನಿಮ್ಮ ಸ್ಟಾರ್‌ಗಿರಿ ಕಿತ್ತುಕೊಳ್ಳಬಹುದು: ಶಾರೂಕ್‌ಗೆ ಎಚ್ಚರಿಕೆ ನೀಡಿದ ರಾಂಗೋಪಾಲ್ ವರ್ಮ

Update: 2016-04-26 14:44 IST

ಮುಂಬೈ, ಎಪ್ರಿಲ್ 26: ವಿವಾದಾಸ್ಪದ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವ ಚಿತ್ರ ನಿರ್ದೇಶಕ ರಾಂಗೋಪಾಲ್ ವರ್ಮಾ ಬಾಲಿವುಡ್ ಬಾದ್‌ಶಹಾ ಶಾರುಕ್ ಖಾನ್‌ರ ಕೈಯಿಂದ ಸಲ್ಮಾನ್ ಖಾನ್ ಸ್ಟಾರ್‌ಗಿರಿ ಕಿತ್ತು ಕೊಳ್ಳಬಹುದೆಂದು ಹೇಳಿರುವುದಾಗಿ ವರದಿಯಾಗಿದೆ. ನಿಮ್ಮ ಕೈಯಲ್ಲಿರುವ ಸ್ಟಾರ್‌ಗಿರಿ ಅದನ್ನು ನೀವು ಕಳಕೊಳ್ಳಬಹುದು. ಕಮಲ್ ಹಾಸನ್‌ರಿಂದ ರಜನೀಕಾಂತ್‌ರ ಕೈ ಸೇರಿದಂತೆ ಎಂದು ಅವರು ಶಾರುಕ್ ಖಾನ್‌ರನ್ನು ಎಚ್ಚರಿಸಿದ್ದಾರೆ. ಶಾರುಕ್ ಸಿನೆಮಾ ಆಯ್ಕೆ ಮಾಡುವ ರೀತಿಯನ್ನೂ ವರ್ಮಾ ಪ್ರಶ್ನಿಸಿದ್ದಾರೆ. ಕಿಂಗ್‌ಖಾನ್ ಕಮಲ್‌ಹಾಸನ್‌ರ ತಪ್ಪುಗಳಿಂದ ಪಾಠ ಕಲಿಯಬೇಕಾಗಿದೆ. ಶಾರುಕ್‌ರ ಫೇನ್ ಫಿಲ್ಮ್‌ನ ಪಾತ್ರ ಮತ್ತು ಆನಂದ್ ಎಲ್. ರಾಯ್‌ರ ಮುಂದಿನ ಸಿನೆಮಾದಲ್ಲಿ ಕೆಲಸ ಮಾಡಲು ಒಪ್ಪಿಕೊಂಡ ನಿರ್ಧಾರವನ್ನು ಟ್ವೀಟ್ ಮಾಡಿ ವರ್ಮಾ ಟೀಕಿಸಿದ್ದಾರೆ. ಆನಂದ್‌ರಾಯ್‌ರ ಚಿತ್ರದಲ್ಲಿ ಶಾರುಕ್ ಕುಳ್ಳನ ಪಾತ್ರವಹಿಸಲಿದ್ದಾರೆ ಇದನ್ನು ರಾಂಗೋಪಾಲ್ ಕಮಲ್‌ರ ಅಪ್ಪುರಾಜ ಚಿತ್ರದ ಪಾತ್ರದಂತೆ ಎಂದು ಹೇಳಿದ್ದಾರೆ.

 ಮೆಗಾಸ್ಟಾರ್ ಶಾರುಕ್‌ನ ಪ್ರಶಂಸಕ ತಾನು ಕುಳ್ಳ ಹಾಗಿ ಅಲ್ಲಿಯೇ ನಿಲ್ಲುತ್ತಿದ್ದಾರೆ. ಕಮಲ್ ಹಾಸನ್ ರಜನೀಕಾಂತ್ ಕೈಯಲ್ಲಿ ತನ್ನ ಫೇಮ್‌ನ್ನು ಕಳೆಕೊಂಡಂತೆ ಎಂದ ವರ್ಮಾ ಕಮಲ್‌ಹಾಸನ್ ಕುಳ್ಳ ದಡಿಯ ಉದ್ದದ ವ್ಯಕ್ತಿ ಹೀಗೆಲ್ಲ ಪಾತ್ರವನ್ನು ಮಾಡಿದ್ದಾರೆ. ಅವರು ಕೂಡಾ ರಜನೀಕಾಂತ್‌ರಂತೆ ದೊಡ್ಡ ಸೂಪರ್‌ಸ್ಟಾರ್ ಆಗಿದ್ದರು. ತಾನು ಶಾರುಕ್ ಖಾನ್ ತಪ್ಪು ಸಲಹೆ ನೀಡುವವರ ಮಾತನ್ನು ಕೇಳಲಾರರೆಂದು ನಿರೀಕ್ಷಿಸುತ್ತೇನೆ. ಶಾರುಕ್ ಕಮಲ ಹಾಸನ್‌ರ ತಪ್ಪಿನಿಂದಪಾಠ ಕಲಿಯಬೇಕಾಗಿದೆ .ಅವರು ಹತ್ತಿರದ ಮತ್ತು ಪ್ರಿಯ ಜನರ ಮೆಗಾ ರಜನೀಕಾಂತ್ ಆಗದಂತೆ ಮಾಡುವವರ ಮಾತನ್ನು ಕೇಳಬಾರದು ಎಂದು ವರ್ಮಾ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News