ಮೊಗರ್ಪಣೆ ಮಸೀದಿಯ ಖಾಝಿ ಸ್ವೀಕಾರ ಸಮಾರಂಭ
ಸುಳ್ಯ, ಎ. 26: ಮೊಗರ್ಪಣೆಯ ಮುಹಿಯ್ಯುದ್ದೀನ್ ಜುಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ ಫಝಲ್ ಹಾಮಿದ್ ಕೋಯಮ್ಮ ತಂಙಳ್ ಅಲ್ ಬುಕಾರಿ ಕೂರತ್‌ರವರಿಂದ ಖಾಝಿ ಸ್ವೀಕಾರ ಸಮಾರಂಭ ನಡೆಯಿತು.
ಮೊಗರ್ಪಣೆ ಜುಮಾ ಮಸೀದಿ ವಠಾರದಲ್ಲಿ ಸಮಾರಂಭದಲ್ಲಿ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್‌ರವರ ವಾರ್ಷಿಕ ದಿಕ್ರ್ ಹಲ್ಖ ಕಾರ್ಯಕ್ರಮ ನಡೆಯಿತು.
ಮಂಞಂಪ್ಪಾರ ಮಜ್ಲಿಸ್ ಅಧ್ಯಕ್ಷ ಶೈಖುನಾ ಮುಹಮ್ಮದ್ ಅಶ್ರಫ್ ಸಖಾಫ್ ನೇತೃತ್ವ ವಹಿಸಿದರು. ಸುಲೈಮಾನ್ ಫಾಝಿಲಿ ದುಆ ನೆರವೇರಿಸಿದರು. ಬಳಿಕ ನಡೆದ ಖಾಝಿ ಸ್ವೀಕಾರದಲ್ಲಿ ಫಝಲ್ ಕೋಯಮ್ಮ ತಂಙಳ್ ಅಲ್‌ಬುಕಾರಿ ಕೂರತ್‌ರವರು ಖಾಝಿ ಸ್ಥಾನ ಸ್ವೀಕರಿಸಿದರು.
ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಖಾಝಿ ಸ್ಥಾನ ನೀಡಿದರು. ಇಸ್ಲಾಮಿನಲ್ಲಿ ಖಾಝಿ ಪರಂಪರೆ ಮತ್ತು ಮಹತ್ವದ ಬಗ್ಗೆ ಅಬ್ದುಲ್ ವಹಾಬ್ ಸಖಾಫಿ ಮಂಬಾಡ್‌ರವರು ಮುಖ್ಯ ಭಾಷಣ ಮಾಡಿದರು.
ಸಮಾರಂಭದಲ್ಲಿ ವಿವಿಧ ಧಾರ್ಮಿಕ ಗಣ್ಯರುಗಳಾದ ಗಾಂಧಿನಗರ ಜುಮಾ ಮಸೀದಿಯ ಮುದರ್ರಿಸ್ ಅಶ್ರಫ್ ಕಾಮಿಲ್ ಸಖಾಫಿ, ಸೈಯದ್ ಆಸಿಮ್ ತಂಙಳ್ ಕಣ್ಣೂರು, ಕುಂಞಿಕೋಯ ಸಅದಿ ತಂಙಳ್, ಸಲಾಹುದ್ದೀನ್ ಸಖಾಫಿ, ಸುಲೈಮಾನ್ ಫಾಝಿಲಿ, ಯೂಸುಫ್ ಕೂರತ್, ಎಸ್.ಎಂ.ಮಹಮ್ಮದ್, ಎಸ್.ಅಬ್ದುಲ್ಲಾ, ಮಹಮ್ಮದ್ ಕುಂಞಿ ಗೂನಡ್ಕ, ಅಬ್ಬಾಸ್ ಕಟ್ಟೆಕ್ಕಾರ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಹಸನ್, ಪ್ರಚಾರ ಸಮಿತಿ ಸಂಚಾಲಕ ಎಸ್.ಸಂಶುದ್ದೀನ್, ಜಮಾಅತ್ ಪ್ರಧಾನ ಕಾರ್ಯದರ್ಶಿ ಕೆ.ವೈ.ಉಸ್ಮಾನ್, ಕಾರ್ಯದರ್ಶಿ ಹಸೈನಾರ್ ಜಯನಗರ, ಆರ್ಥಿಕ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್, ಉಪಾಧ್ಯಕ್ಷ ಲತೀಫ್ ಸಿಲಿಕಾನ್, ಜಮಾಅತ್ ಅಧ್ಯಕ್ಷ ಅಬ್ದುಲ್ ರಶೀದ್ ಕಮ್ಮಾಡಿ ಹಾಗೂ ಕಾರ್ಯಕ್ರಮದ ಸಂಚಾಲಕ ಬಿ.ಎಸ್.ಶರೀಫ್, ಎಸ್. ಸಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.