ಪಂಜಿಮೊಗರು ಶಾಲೆಯಲ್ಲಿ ಚಿಣ್ಣರ ಮೇಳ

Update: 2016-04-26 10:23 GMT

ಮಕ್ಕಳ ಬೇಸಗೆ ಸಂತಸ ಕಲಿಕಾ ಶಿಬಿರ 13 ನೇ ವರ್ಷದ ಚಿಣ್ಣರ ಮೇಳ 2016 ಪಂಜಿಮೊಗರು ಶಾಲೆಯಲ್ಲಿ ತಾ. 17 ರಿಂದ 21 ರ ವರೆಗೆ ನಡೆಯಿತು. ತಾ. 17 ರಂದು ಗಿಡವೊಂದಕ್ಕೆ ನೀರೆರೆಯುವ ಮೂಲಕ ಸಮುದಾಯ ಸಾಂಸ್ಕೃತಿಕ ಸಂಘಟನೆಯ ವಾಸುದೇವ್ ಉಚ್ಚಿಲ್ ಶಿಬಿರಕ್ಕೆ ಚಾಲನೆ ನೀಡಿದರು. ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಎಸ್.ಎಫ್.ಐ ಮುಖಂಡರಾದ ಚರಣ್ ಶೆಟ್ಟಿ, ಮಾಧುರಿ ಬೋಳಾರ್, ಡಿ.ವೈ.ಎಫ್.ಐ ಮುಖಂಡರಾದ ಅನಿಲ್ ಡಿಸೋಜ ಉಪಸ್ಥಿತರಿದ್ದರು.

ಮಕ್ಕಳ ಪ್ರತಿಭೆಗಳನ್ನು ಹೆಚ್ಚಿಸುವ ಕ್ರಿಯಾತ್ಮಕ ಚಟುವಟಿಕೆಗಳನ್ನು ತೊಡಗಿಸಿಕೊಳ್ಳುವ ಉದ್ದೇಶದೊಂದಿಗೆ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಯುವ ಪ್ರತಿಭೆ ಅಕ್ಷತಾ ಕುಡ್ಲ ಹಾಡು, ಹಾಡಿನ ಮೂಲಕ ಕಲಿಕೆಯ ವಿಧಾನ ಹಾಗೂ ಮಿಮಿಕ್ರಿ ಕಲಿಸಿಕೊಟ್ಟರು. ಶಶಿ ಬೋಂದೆಲ್ ಶಿಬಿರಾರ್ಥಿಗಳಿಗೆ ಆಟ, ಮಾತನಡುವ ಗೊಂಬೆಯ ಮೂಲಕ ಮನರಂಜಿಸಿದರು. ಖ್ಯಾತ ವ್ಯಂಗ್ಯಚಿತ್ರಕಾರರಾದ ಹರಿಚ್ಚಂದ್ರ (ಹರಿಣಿ) ವ್ಯಂಗ್ಯಚಿತ್ರ ಬಿಡಿಸಲು ಕಲಿಸಿದರು, ನವೀನ್ ಪಿಲಾರು ಮಕ್ಕಳಿಗೆ ಕ್ರಾಪ್ಟ್ ತರಗತಿ ನೀಡಿದರು. ಗುರುಮೂರ್ತಿ , ಮಾನಸ್ವಿ ಸ್ವರೂಪ್ ಹಾಡುಗಳನ್ನು ಹಾಗೂ ಗ್ರೀಟಿಂಗ್ಸ್, ಕಾಗದದ ಟೋಪಿ, ನವಿಲು ರಚಿಸುವುದನ್ನು , ವ್ಯಕ್ತಿತ್ವ ವಿಕಸನದ ಕುರಿತು ಮೈಮ್ ರಾಮ್ ದಾಸ್ ತಿಳಿಸಿದರು. ಆರೋಗ್ಯ ಸಲಹೆಯನ್ನು ಡಾ. ಸತೀಶ್ ಕಲ್ಲಿಮಾರ್ ಹಾಗೂ ಡಾ. ಶ್ವೇತಾ ನೀಡಿದರು. ಐದು ದಿನಗಳ ಶಿಬಿರವು ಕೊನೆಯ ದಿನ ಪಿಲಿಕುಳ ಮಾನಸ ಪ್ರವಾಸದೊಂದಿಗೆ ಸಮಾರೋಪಗೊಂಡಿತು.

ಶಿಬಿರದ ಚಟುವಟಿಕೆಗಳಲ್ಲಿ ಮಕ್ಕಳ ಸ್ವರ ತಂಡದ ಪುನೀತ್, ಹನುಮಂತ, ಕಾರ್ತಿಕ್, ರಾಘವೇಂದ್ರ, ಸುನಿಲ್, ಎಸ್.ಎಫ್.ಐ ಮುಖಂಡರಾದ ಚರಣ್ ಶೆಟ್ಟಿ, ಸಂತೋಷ್ ಡಿಸೋಜ ಡಿ.ವೈ.ಎಫ್.ಐ ಮುಖಂಡರಾದ ಅನಿಲ್ ಡಿಸೋಜ, ಮುಸ್ತಾಫ ಎಂ.ಬಿ, ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News