×
Ad

ಥರ್ಮೋ ಡೈನಾಮಿಕ್ಸ್ ಗೆ ಸಂಸ್ಕೃತದಲ್ಲಿ ಏನು ಹೇಳುವುದು, ಸ್ಮೃತಿ ಜೀ ?

Update: 2016-04-26 15:53 IST

ನವದೆಹಲಿ : ಸಂಸ್ಕೃತ ಕಲಿತಲ್ಲಿ ನಮ್ಮ ದೇಶದ ಇಂಜಿನಿಯರುಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು ಎಂದು ನಮ್ಮ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ತಿಳಿದಂತಿದೆ.
ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ನಮ್ಮವಿದ್ಯಾರ್ಥಿಗಳು ಕಲಿಯುವಂತಾಗಲು ಐಐಟಿಗಳು ಅವರನ್ನು ಉತ್ತೇಜಿಸಬೇಕೆಂದುಮಾಜಿ ಹಿರಿಯ ಅಧಿಕಾರಿ ಎನ್ ಗೋಪಾಲಸ್ವಾಮಿಯವರ ಅಧ್ಯಕ್ಷತೆಯ ಸಮಿತಿಯೊಂದು ಶಿಫಾರಸು ಮಾಡಿದೆಯೆಂದುಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ‘‘ಅಥರ್ವ ವೇದ, ವೈಶೇಶಿಕ ದರ್ಶನ ಮುಂತಾದವುಗಳು ವೈಜ್ಞಾನಿಕ ವಿಚಾರಗಳ ಭಂಡಾರವಾಗಿದೆ. ಅಂತೆಯೇ ಸಿದ್ಧಾಂತ ಶಿರೋಮಣಿ, ವೃಕ್ಷ ಆಯುರ್ವೇದ, ಉಪವನ ವಿನೋದ, ಮಾಯಮತಂ ಇತ್ಯಾದಿ ಸಂಶೋಧನೆ ಹಾಗೂ ಆವಿಷ್ಕಾರಗಳ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡುತ್ತವೆ,’’ಎಂದು ಸಮಿತಿ ತಿಳಿಸಿದೆಯೆಂದು ಸಚಿವೆ ಮಾಹಿತಿ ನೀಡಿದ್ದಾರೆ.
‘‘ಆದುದರಿಂದ ಐಐಟಿಗಳು, ಮುಖ್ಯವಾಗಿ ವೈಜ್ಞಾನಿಕ ಮಾಹಿತಿಯ ಭಂಡಾರ ತುಂಬಿರುವ ಸಂಸ್ಕೃತ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು,’’ಎಂದು ಸ್ಮತಿ ಹೇಳಿದ್ದಾರೆ.
ಸ್ಮತಿ ಹೇಳಿಕೆಯನ್ನು ಅಣಕಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದು ‘‘ಸಿ ++, ಜಾವಾ, ಎಸ್‌ಓಎಲ್ ಮುಂತಾದವುಗಳಿಗೆ ಸ್ಪರ್ಧೆ ನೀಡುವ ಒಂದೇ ಭಾಷೆ ಸಂಸ್ಕೃತವಾಗಿದೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ಒಬ್ಬರಂತೂ ‘ಸಂಸ್ಕೃತದಲ್ಲಿ ಥರ್ಮೋ ಡೈನಾಮಿಕ್ಸ್ ಗೆ ಏನಂತಾರೆ?’’ ಎಂದು ಟ್ವೀಟ್ ಮುಖಾಂತರ ಸಚಿವೆಯನ್ನು ಪ್ರಶ್ನಿಸಿದ್ದಾರೆ.

 

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News