ಥಿಯೇಟರ್‌ಗಳಲ್ಲಿ ಮೋದಿ ಸರಕಾರದ ಸಾಧನೆಗಳ ಪ್ರದರ್ಶನ: ಶಿವಸೇನೆ ಆಕ್ರೋಶ
Update: 2016-04-26 16:28 IST
ಮುಂಬೈ, ಎ. 25: ಥಿಯೇಟರ್‌ಗಳಲ್ಲಿ ಸಿನೆಮಾ ಪ್ರದರ್ಶನಕ್ಕೆ ಮುನ್ನ ನರೇಂದ್ರ ಮೋದಿ ಸರಕಾರದ ಸಾಧನೆಗಳ ಹೃಸ್ವಚಿತ್ರ ಪ್ರದರ್ಶನದ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ದೇಶದ ಶೇ. 33ರಷ್ಟು ಭಾಗ ಬರದಿಂದ ತತ್ತರಿಸಿದ್ದು, ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ. ಹೀಗಿರುವಾಗ ಸರಕಾರದ ಸಾಧನೆ ಎಂದು ಚಿತ್ರ ಪ್ರದರ್ಶಿಸಿದರೆ ಹೇಗೆ ಫಲ ಸಿಗುವುದು ಎಂದು ಸೇನೆ ಪ್ರಶ್ನಿಸಿದೆ.
ಈ ಬಗ್ಗೆ ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದೆ.
ಕೇಂದ್ರ ಸಚಿವ ವೆಂಕಯ್ಯನಾಯ್ಡು ನೇತೃತ್ವದ ಸಚಿವರ ತಂಡ ಮೋದಿ ಸರಕಾರದ ಸಾಧನೆಗಳನ್ನು ವಿವರಿಸುವ ಸಿನೆಮಾ ಥಿಯೇಟರ್‌ಗಳಲ್ಲಿ ಪ್ರದರ್ಶಿಸುವುದರ ಬಗ್ಗೆ ನಿರ್ಧಾರ ಕೈಗೊಂಡಿದೆ. ಎರಡು ವಾರಗಳಲ್ಲಿ ನರೇಂದ್ರ ಮೋದಿ ಸಾಧನೆಗಳ ಬಗ್ಗೆ ಸಿನೆಮಾ ನಿರ್ಮಿಸಲಾಗುವುದು. ಅದನ್ನು ಚಲನಚಿತ್ರದ ಮುನ್ನ ಥಿಯೇಟರ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸೂಚನೆ ನೀಡಲಾಗಿದೆ.