×
Ad

ಸ್ಕಾರ್ಫ್ ಧರಿಸಿ ಮೆಡಿಕಲ್ ಪ್ರವೇಶ ಪರೀಕ್ಷೆ ಬರೆಯಬಹುದು: ಕೇರಳ ಹೈಕೋರ್ಟ್

Update: 2016-04-26 17:21 IST

ಕೊಚ್ಚಿ, ಎಪ್ರಿಲ್ 26: ಅಖಿಲಭಾರತ ಮೆಡಿಕಲ್ ಪ್ರವೇಶ ಪರೀಕ್ಷೆಗೆ ಶಿರೋವಸ್ತ್ರ ಧರಿಸಿ ಹಾಜರಾಗಬಹುದೆಂದು ಹೈಕೋರ್ಟ್ ಅನುಮತಿ ನೀಡಿದೆ. ಜಸ್ಟಿಸ್ ಮುಹಮ್ಮದ್ ಮುಷ್ತಾಖ್ ಅಧ್ಯಕ್ಷತೆಯ ಬೆಂಚ್ ಈ ಪ್ರಧಾನ ತೀರ್ಪು ಹೊರಡಿಸಿರುವುದಾಗಿ ವರದಿಯಾಗಿದೆ. ಶಿರೋವಸ್ತ್ರಧರಿಸಿ ಬರುವವರು ಪರೀಕ್ಷೆ ಆರಂಭವಾಗುವುದಕ್ಕಿಂತ ಅರ್ಧಗಂಟೆ ಮೊದಲು ವರದಿ ಮಾಡಬೇಕೆಂದು ಕೋರ್ಟ್ ನಿರ್ದೇಶಿಸಿದೆ.

ಶಿರೋವಸ್ತ್ರ ಧರಿಸಿ ಬರುವವರಿಗೆ ಪರೀಕ್ಷೆ ಬರೆಯಲು ಸಮ್ಮತಿಸಲಾಗದು ಎಂದು ಮೊದಲು ಸಿಬಿಎಸ್‌ಇ ಸರ್ಕ್ಯೂಲರ್ ಹೊರಡಿಸಿತ್ತು. ಪರೀಕ್ಷೆಯಲ್ಲಿ ನಕಲು ತಡೆಯುವುದು ಉದ್ದೇಶದಿಂದ ಸಿಬಿಎಸ್‌ಇ ಡ್ರಸ್ ಕೋಡ್ ನಿಯುಕ್ತಿಗೊಳಿಸಿದೆ.

 ಮುಸ್ಲಿಂ ಹೆಮ್ಮಕ್ಕಳು ಮುಖ ಮತ್ತು ಮುಂಗೈ ಹೊರತು ಪಡಿಸಿ ದೇಹದ ಇತರಭಾಗಗಳನ್ನು ಮರೆಸುವ ಸ್ವಾತಂತ್ಯದ ಇದೆ ಎಂದು ಕೋರ್ಟ್ ಹೇಳಿದೆ. ಪರಿಚ್ಛೇದ 25(1) ಪ್ರಕಾರ ಧಾರ್ಮಿಕ ಆಚರಣೆಗಳಿಗೆ ಸಂವಿಧಾನ ಅನುಮತಿ ನೀಡಿದೆ. ಪಬ್ಲಿಕ್ ಆರ್ಡರ್, ನೈತಿಕ ಇವುಗಳಿಗೆ ಬಾಧಕವಾಗುವುದಿದ್ದರೆ ಮಾತ್ರವೇ ನಿಷೇಧ ಹೇರಬೇಕಾಗುತ್ತದೆ ಎಂದು ಕೋರ್ಟ್ ಬೆಟ್ಟು ಮಾಡಿದೆ. ಶಿರೋವಸ್ತ್ರಮತ್ತು ಉಧ್ಧ ಉಡುಪು ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅಡ್ಡಿಯಾಗುವುದಿಲ್ಲ.ಅದೇವೇಳೆ ಶಂಕೆ ಇದೆ ಎಂದಾದರೆ ಮಹಿಳಾ ಇನ್ವಿಜಿಲೇಟರ್ಗಳಿಗೆ ದೇಹ ಪರಿಶೋಧನೆ ನಡೆಸಬಹುದು ಎಂದು ಕೋರ್ಟ್ ಹೇಳಿದೆ. ಕೋರ್ಟ್‌ನಲ್ಲಿ ಹಾಜರಾದವರೆಗೆ ಮಾತ್ರವಲ್ಲ ಈ ಆದೇಶ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ ಎಂದು ಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News