ದಾವೂದ್ ಇಬ್ರಾಹೀಂಗೆ ಏನೂ ಆಗಿಲ್ಲ, ಆರೋಗ್ಯದಿಂದ್ದಾರೆ: ಚೋಟಾ ಶಕೀಲ್
ಹೊಸದಿಲ್ಲಿ, ಎಪ್ರಿಲ್ 26: ಅಂಡರ್‌ವರ್ಲ್ಡ್ ಡಾನ್ 1993ರ ಮುಂಬೈ ಸರಣಿ ಸ್ಫೋಟದ ಮುಖ್ಯ ಆರೋಪಿ ದಾವೂದ್ ಇಬ್ರಾಹೀಂ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ ಎಂಬ ವರದಿಯನ್ನು ಚೋಟಾ ಶಕೀಲ್ ನಿರಾಕರಿಸಿದ್ದಾನೆಂದು ವರದಿಗಳು ತಿಳಿಸಿವೆ. ಗ್ಯಾಂಗ್ರೀನ್ ರೋಗದಿಂದ ಇಬ್ರಾಹೀಂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಕಾಲು ತುಂಡರಿಸುವ ಸ್ಥಿತಿಯಲ್ಲಿದ್ದಾನೆ. ನಡೆದಾಡುವ ಸ್ಥಿತಿಯಲ್ಲಿದ್ದಾನೆಂದು ಗುಪ್ತಚರ ಸಂಸ್ಥೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.
ರಕ್ತಸಂಚಾರ ಸರಿಯಾಗಿ ಆಗುತ್ತಿಲ್ಲ ಜೀವ ಉಳಿಯಬೇಕಾದರೆ ಕಾಲು ಕತ್ತರಿಸಬೇಕಾಗಿದೆ. ಈಗ ಪಾಕಿಸ್ತಾನದ ಲಿಯಾಕತ್ ಆಸ್ಪತ್ರೆಯಲ್ಲಿ ಮತ್ತು ಕಂಬೈಂಡ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ವರದಿಗಳು ಹೇಳಿದ್ದವು. ಈ ವರದಿಯನ್ನು ನಿರಾಕರಿಸಿ ದಾವೂದ್ ಬಂಟ ಚೋಟಾ ಶಕೀಲ್ ಇಬ್ರಾಹೀಂ ಆರೋಗ್ಯ ಸರಿಯಾಗಿಯೇ ಇದೆ. ದಾವೂದ್ ಸಂಪೂರ್ಣ ಆರೋಗ್ಯದಿಂದಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಗುಪ್ತಚರ ಸಂಸ್ಥೆ ವರದಿ ತಪ್ಪು. ಡಿಕಂಪೆನಿಯ ಉದ್ದಿಮೆಗಳನ್ನು ನಾಶಪಡಿಸಲು ಇಂತಹ ಅಪವಾದಗಳನ್ನು ಹರಡಲಾಗಿದೆ ಎಂದು ಚೋಟಾ ಶಕೀಲ್ ತಿಳಿಸಿರುವುದಾಗಿ ವರದಿಯಾಗಿದೆ.