×
Ad

‘ಸಮ್ಮರ್ ಫೆಸ್ಟಿವಲ್-2016’ ವಸ್ತು ಪ್ರದರ್ಶನ: ವಿಶೇಷ ಆಕರ್ಷಣೆಯಾಗಿ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ‘ಸ್ನೋ ವರ್ಲ್ಡ್’

Update: 2016-04-26 20:12 IST
ಸಾಂಧರ್ಬಿಕ ಚಿತ್ರ

ಮಂಗಳೂರು, ಎ. 26: ರೋಯಲ್ ಕಾರ್ನಿವಲ್ ಎಗ್ಸಿಬಿಟ್ ವತಿಯಿಂದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಎಪ್ರಿಲ್ 14ರಿಂದ ಆರಂಭಗೊಂಡಿರುವ ಬೃಹತ್ ವಸ್ತು ಪ್ರದರ್ಶನದಲ್ಲಿ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ವಿಶೇಷ ಆಕರ್ಷಣೆಯಾಗಿ ‘ಸ್ನೋ ವರ್ಲ್ಡ್’ ಆಯೋಜಿಸಲಾಗಿದೆ.

ವಸ್ತು ಪ್ರದರ್ಶನಕ್ಕೆ ಆಗಮಿಸುವ ಗ್ರಾಹಕರಿಗೆ ಎಪ್ರಿಲ್ 28ರಿಂದ ಸ್ನೋ ವರ್ಲ್ಡ್‌ನ ಮನೋರಂಜನೆ ಲಭಿಸಲಿದೆ. 100 ಟನ್ ಮಂಜುಗಡ್ಡೆ, 38 ಟನ್ ಸಾಮರ್ಥ್ಯದ ಏರ್‌ಕಂಡಿಷನರ್ ಸಹಿತ ಇತರ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಮಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ಏರ್ಪಡಿಸಲಾಗಿದೆ. ಸ್ನೋ ವರ್ಲ್ಡ್‌ನೊಳಕೆ ಪ್ರವೇಶಿಸುವ ಗ್ರಾಹಕರಿಗೆ ವಿಶೇಷ ಶೀತದ (ಕೋಲ್ಡ್) ಅನುಭವದ ಸಹಿತ ಅಲ್ಲಿ ಅಳವಡಿಸಲಾದ ವೇದಿಕೆಯಲ್ಲಿ ಮನೋರಂಜನೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಪಂಚದ 7 ಅದ್ಭುತಗಳ ಮಾದರಿ ಪ್ರದರ್ಶನ

ಎಪ್ರಿಲ್ 14ರಿಂದ ಆರಂಭಗೊಂಡಿರುವ ಈ ‘ಮಂಗಳೂರು ಸಮ್ಮರ್ ಫೆಸ್ಟಿವಲ್-2016’ ವಸ್ತುಪ್ರದರ್ಶನದಲ್ಲಿ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ಪ್ರಪಂಚದ 7 ಅದ್ಭುತಗಳ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ತಾಜ್‌ಮಹಲ್, ಗ್ರೇಟ್ ವಾಲ್ ಆಫ್ ಚೀನಾ, ಕ್ರೈಸ್ಟ್ ರೆದಿಮೇರ್, ಪೀಸಾ ಟವರ್, ಮೆಕ್ಸಿಕೊ ಪಿರಮಿಡ್, ರೋಮನ್ ಕೊಲೊಸಿಯಮ್, ಐಫೇಲ್ ಟವರ್‌ಗಳ ಮಾದರಿಗಳ ಪ್ರದರ್ಶನವಿದೆ. ಈ ಅದ್ಭುತಗಳ ಮುಂದೆ ಗ್ರಾಹಕರಿಗೆ ತಮ್ಮ ಸೆಲ್ಫಿಗಳನ್ನು ಪಡೆಯಲು ಅವಕಾಶವಿದೆ. ವಸ್ತು ಪ್ರದರ್ಶನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್, ಶಾಪಿಂಗ್, ಆಹಾರ ಮಳಿಗೆ, ಕ್ರೀಡಾ ಮನೋರಂಜನೆ ಮೊದಲಾದವುಗಳು ವಸ್ತುಪ್ರದರ್ಶನದಲ್ಲಿ ಈಗಾಗಲೇ ಲಭ್ಯವಿದೆ. ವಸ್ತು ಪ್ರದರ್ಶನವು ಮಧ್ಯಾಹ್ನ 3:30ರಿಂದ 9 ಗಂಟೆಯ ವರೆಗೆ ನಡೆಯಲಿದೆ ಎಂದು ರೋಯಲ್ ಕಾರ್ನಿವಲ್ ಎಗ್ಸಿಬಿಟ್‌ನ ಮುಷ್ತಾಕ್ ಖತೀಬ್ ಮತ್ತು ಸೈಯದ್ ಹಫೀಝ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News