×
Ad

ಅರಳ ಕಬಡ್ಡಿ : ಕೊಲ ಫ್ರೆಂಡ್ಸ್ ತಂಡಕ್ಕೆ ಪ್ರಶಸ್ತಿ

Update: 2016-04-27 10:17 IST

ವಿಟ್ಲ, ಎ. 27: ಬಂಟ್ವಾಳ ತಾಲೂಕಿನ ಅರಳ-ಕಲ್ಲಗುಡ್ಡೆ ನ್ಯೂ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಕಲ್ಲಗುಡ್ಡೆ ಪ್ರೀಮಿಯರ್ ಲೀಗ್ (ಕೆಪಿಎಲ್) ಕಬಡ್ಡಿ ಪಂದ್ಯಾಟ ಇತ್ತೀಚೆಗೆ ಎರ್ಮಾಳಪದವು ಕ್ರೀಡಾಂಗಣದಲ್ಲಿ ನಡೆಯಿತು.

ಬಂಟ್ವಾಳ ತಾ.ಪಂ. ಸದಸ್ಯೆ ಮಂಜುಳಾ ಸದಾನಂದ ಅವರು ಪಂದ್ಯಾಟವನ್ನು ಉದ್ಘಾಟಿಸಿದರು.

ಅರಳ ಗ್ರಾ.ಪಂ. ಉಪಾಧ್ಯಕ್ಷ ಜಗದೀಶ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಅರಳ ಗ್ರಾ.ಪಂ. ಸದಸ್ಯ ಲಕ್ಷ್ಮೀಧರ ಶೆಟ್ಟಿ, ಉದ್ಯಮಿ ರಂಜನ್ ಕುಮಾರ್ ಶೆಟ್ಟಿ, ಅರಳ ವಲಯ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಕೆ.ಎಸ್., ರಾಯಿ ವಲಯ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಬಶೀರ್ ಮಾರ್ಗದಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಉದ್ಯಮಿಗಳಾದ ಹಕೀಂ ಕಲ್ಲಗುಡ್ಡೆ, ಜಬ್ಬಾರ್ ಮೂಲರಪಟ್ನ, ಹಿದಾಯತ್ ಮುತ್ತೂರು, ಲತೀಫ್ ಕಲ್ಲಗುಡ್ಡೆ, ಕ್ಲಬ್ ಅಧ್ಯಕ್ಷ ಮುಯ್ಯದ್ದಿ, ಪದಾಧಿಕಾರಿಗಳಾದ ಶಮೀರ್, ಹಾರಿಸ್ ಮೊದಲಾದವರು ಉಪಸ್ಥಿತರಿದ್ದರು.

ಸಮಾರೋಪದಲ್ಲಿ ಪುತ್ತೂರು ಸರಕಾರಿ ಸಂಯುಕ್ತ ಪ.ಪೂ. ಕಾಲೇಜು ಪ್ರಾಂಶುಪಾಲ ಸಿಪ್ರಿಯನ್ ಡಿಸೋಜ ಹಾಗೂ ಸಿದ್ಧಕಟ್ಟೆ ಜನಜಾಗೃತಿ ವೇದಿಕೆ ಅಧ್ಯಕ್ಷ ಜಗದೀಶ ಕೊಲ ವಿಜೇತರಿಗೆ ಬಹುಮಾನ ವಿತರಿಸಿದರು.

ಶಾಕಿರ್ ಮೂಲರಪಟ್ನ ಸ್ವಾಗತಿಸಿ, ಶಬೀರ್ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

 ಕೊಲ ಫ್ರೆಂಡ್ಸ್ ಪ್ರಥಮ, ಹಾಯ್ ಫ್ರೆಂಡ್ಸ್ ಮುತ್ತೂರು ದ್ವಿತೀಯ, ಪಾಟ್ನಾ ಗೈಸ್ ತೃತೀಯ ಹಾಗೂ ಎಸ್.ವಿ. ಇಂಡಿಯನ್ಸ್ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News