ಕಲ್ಲಡ್ಕ : ಸೌಹಾರ್ದ ಸಹಕಾರಿ ಸಂಘಕ್ಕೆ ಆಯ್ಕೆ
Update: 2016-04-27 10:19 IST
ವಿಟ್ಲ, ಎ. 27: ಕಲ್ಲಡ್ಕ-ಹನುಮಾನ್ ನಗರದ ಶ್ರೀ ರಾಮ ಸೌಹಾರ್ದ ಸಹಕಾರಿ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರ ಪ್ರಥಮ ಸಭೆಯಲ್ಲಿ ನಾರಾಯಣ ಶೆಟ್ಟಿ ಕುಲ್ಯಾರ್ ಅಧ್ಯಕ್ಷರಾಗಿ ಹಾಗೂ ಸುಜಿತ್ ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ನಿರ್ದೇಶಕರಾಗಿ ಡಾ. ಪ್ರಭಾಕರ ಭಟ್, ಬಿ. ನಾರಾಯಣ ಸೋಮಯಾಜಿ, ವಸಂತ ಮಾಧವ, ರಮೇಶ ಎನ್., ಕುಶಾಲಪ್ಪ ಅಮ್ಟೂರು, ಕೃಷ್ಣಪ್ರಸಾದ್, ವಸಂತ ಬಲ್ಲಾಳ, ಗಂಗಾ ಮಾತಾಜಿ, ಮಲ್ಲಿಕಾ ಶೆಟ್ಟಿ, ನಾರಾಯಣ ಶೆಟ್ಟಿ ಕುಲ್ಯಾರ್, ಯತಿನ್ ಕುಮಾರ್ ಏಳ್ತಿಮಾರ್, ಸುಜಿತ್ ಕುಮಾರ್, ಪ್ರೇಮಾ, ನಾಗೇಶ ಕಲ್ಲಡ್ಕ, ರವಿರಾಜ ಅವರನ್ನು ನೇಮಿಸಲಾಯಿತು.