ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ವತಿಯಿಂದ 'ಏಕತೆ ಭದ್ರತೆ' ಕಾರ್ಯಕ್ರಮ
ಫರಂಗಿಪೇಟೆ, ಎ. 27 : ಹಲವು ಸ್ಫೋಟಕದ ಆರೋಪಿ ಇಂದ್ರೇಶ್ ಕುಮಾರ್ ನೇತೃತ್ವದಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಮುಸ್ಲಿಮ್ ಮಂಚ್ ಮೂಲಕ ಸೂಫಿ ಮುಸ್ಲಿಮ್ ಎಂದು ಮುಸ್ಲಿಮರ ನಡುವೆ ಸಂಘರ್ಷವನ್ನುಂಟು ಮಾಡಿ ತನ್ನ ಗುರಿ ಸಾಧನೆಗಾಗಿ ನಡೆಸುವ ವ್ಯವಸ್ಥಿತ ಸಂಚಾಗಿದೆ ಎಂದು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಷ್ಟ್ರೀಯ ಏಕತಾ ಅಭಿಯಾನದ ಅಂಗವಾಗಿ ಬಿಸಿ ರೋಡ್ ವ ಲಯ ವತಿಯಿಂದ 'ಏಕತೆಯೇ ಭದ್ರತೆ' ಎಂಬ ಬಗ್ಗೆ ಫರಂಗಿಪೇಟೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇಬ್ರಾಹಿಮ್ ಮೌಲವಿ ಕೇರಳ ರಾಷ್ಟೀಯ ಕಾರ್ಯದರ್ಷಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಇವರು ಮುಖ್ಯ ಬಾಷಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿ, ಉದ್ಘಾಟನೆಯನ್ನು ಜಾಫರ್ ಸಾದಿಕ್ ಫೈಝಿ ಮಾಡಿದರು. ಮುಖ್ಯ ಅತಿಥಿಗಳಾಗಿ ಯೂಸುಫ್ ಮಿಸ್ಬಾಹಿ ಮುದರ್ರಿಸ್ ಜುಮಾ ಮಸ್ಜಿದ್ ಮೇಲಂಗಡಿ ಉಳ್ಳಾಲ್. ಮುಹಮ್ಮದ್ ಬಾವ ಅದ್ಯಕ್ಷರು ಎಮ್.ಜೆ.ಎಮ್ ಫರಂಗಿಪೇಟೆ, ಮಜೀದ್ ನಿಝಾಮಿ ಜಿಲ್ಲಾ ಉಪಾಧ್ಯಕ್ಷರು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್, ಹಾರಿಸ್ ಹನೀಫಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶಾಫಿ ಬೆಳ್ಳಾರೆ ರಾಜ್ಯ ಕಾರ್ಯದರ್ಶಿ ಪಿ.ಎಫ್.ಐ., ಸುಲೈಮಾನ್ ಉಸ್ತಾದ್ ಮುಖ್ಯಸ್ಥರು ಯಂಗ್ ಫ್ರೆಂಡ್ಸ್ ಅಮೆಮಾರ್, ಸಲೀಮ್ ಫರಂಗಿಪೇಟೆ ತಾಲೂಕು ಪ್ರದಾನ ಕಾರ್ಯದರ್ಶಿ ಪಿ.ಎಫ್.ಐ., ಇಕ್ಬಾಲ್ ಮದ್ದ ಅಧ್ಯಕ್ಷರು ಪಿ.ಎಫ್.ಐ ಬಿಸಿ ರೋಡ್ ವಲಯ, ನೌಫಲ್ ಅಧ್ಯಕ್ಷರು ಯೂತ್ ಫೆಡರೇಷನ್ ಫರಂಗಿಪೇಟೆ, ಹಬೀಬ್ ಅಧ್ಯಕ್ಷರು ಅಲ್ ಮಿಸ್ಬಾಹ್ ಪೌಂಡೇಶನ್ ಫರಂಗಿಪೇಟೆ, ಮೂಸಬ್ಬ ಅಧ್ಯಕ್ಷರು ತುಂಬೆ ಮಸೀದಿ ಉಪಸ್ತಿತರಿದ್ದರು. ಅಫ್ವಾನ್ ತುಂಬೆ ಕಿರಾಅತ್ ಓದಿದರು. ರಹ್ಮಾನ್ ಮಟ ನಿರೂಪಿಸಿದರು.