ಮಕ್ಕಳು ಕಾರು ಚಲಾಯಿಸಿದರೆ ಶಿಕ್ಷೆ ಹತ್ತವರಿಗೆ!: ಗಡ್ಕರಿ ಪ್ಲಾನ್
ಹೊಸದಿಲ್ಲಿ, ಎಪ್ರಿಲ್ 27: ವಯಸ್ಕರಲ್ಲದ ಮಕ್ಕಳು ವಾಹನ ಚಲಾಯಿಸಿದರೆ ಅವರ ಹೆತ್ತವರಿಗೆ ಶಿಕ್ಷೆ ಲಭಿಸುವಂತೆ ಮೋಟಾರು ವಾಹನ ಕಾನೂನಿನಲ್ಲಿ ಸುಧಾರಣೆ ತರಲಾಗುತ್ತಿದೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಸುಧಾರಣೆಗಳನ್ನು ಸೂಚಿಸಲಿಕ್ಕಾಗಿ ರಾಜಸ್ಥಾನ ಸಾರಿಗೆ ಸಚಿವ ಯೂನುಸ್ ಖಾನ್ ಅಧ್ಯಕ್ಷತೆಯ ಸಮಿತಿಯನ್ನು ನೇಮಿಸಲಾಗಿದೆ. ಹದಿನೈದು ದಿನದೊಳಗೆ ವರದಿ ನೀಡಬೇಕೆಂದು ಸಮಿತಿಗೆ ತಿಳಿಸಲಾಗಿದೆಯೆಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ನಡುವೆ ದೇಶೀಯ ಹೆದ್ದಾರಿಗಳಲ್ಲಿ ತ್ರಿಡಿ ಪೈಂಟಿಂಗ್‌ನ ಮೂಲಕ ಸ್ಪೀಡ್ ಬ್ರೇಕರ್‌ಗಳನ್ನು ನಿರ್ಮಿಸಲಾಗುವುದೆಂದು ಸಚಿವ ನಿತಿನ್ ಗಡ್ಕರಿ ಹೇಳಿದರು. ಪರೀಕ್ಷಾರ್ಥ ಸ್ಥಾಪಿಸಲಾದ ಒಂದು ತ್ರಿಡಿ ಬ್ರೇಕರ್‌ನ ಫೋಟೊ ಸಹಿತ ಈ ವಿಷಯವನ್ನು ಸಚಿವರು ಟ್ವಿಟರ್ ಮೂಲಕ ತಿಳಿಸಿದ್ದಾರೆ. ದೂರದಲ್ಲಿ ನೋಡುವಾಗ ರಸ್ತೆಯಲ್ಲಿ ಹಂಪ್‌ಗಳಿವೆ ಎಂಬಂತೆ ಕಾಣಿಸುತ್ತದೆ. ಆದರೆ ಅದು ಕೇವಲ ಪೈಂಟಿಂಗ್ ಮಾತ್ರ ಆಗಿರುತ್ತದೆ. ವೇಗವನ್ನು ಕಡಿಮೆಗೊಳಿಸಲಿಕ್ಕಾಗಿ ಚಾಲಕರನ್ನು ಪ್ರೇರೇಪಿಸಲು ತ್ರಿಡಿ ಪೈಂಟಿಂಗ್ ಹಾಕಲಾಗುವುದು. ಆದರೆ ಅದನ್ನು ದಾಟುವಾಗ ವಾಹನ ಕುಲುಕುವ ಅನುಭವವಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ.