×
Ad

ಅಸೂಯೆಯಿಂದ ಮುಗ್ಧ ಮಗುವನ್ನು ಕತ್ತು ಹಿಸುಕಿ ಕೊಂದ ಚಿಕ್ಕಮ್ಮ

Update: 2016-04-27 11:26 IST

ಮೀರತ್,ಎಪ್ರಿಲ್ 27: ಮೀರತ್ ಸರ್ಧನಾದ ಭಾಮೌರಿ ಗ್ರಾಮದಲ್ಲಿ ನಾಲ್ಕುವರ್ಷದ ಬಾಲಕನನ್ನು ಹತ್ಯಗೈದ ಘಟನೆ ವರದಿಯಾಗಿದೆ. ಬಾಲಕ ರವಿವಾರ ಬೆಳಗಿನಿಂದ ನಾಪತ್ತೆಯಾಗಿದ್ದ. ರಾತ್ರೆ ಅವನ ಶವ ಚಿಕ್ಕಪ್ಪನ ಮಂಚದ ಕೆಳಗೆ ಪತ್ತೆಯಾಗಿತ್ತು. ಘಟನೆಯ ನಂತರ ಮನೆಯವರು ಬಾಲಕನ ಚಿಕ್ಕಮ್ಮ ಮಂತ್ರ ಕ್ರಿಯೆ ಮೂಲಕ ಬಾಲಕನನ್ನು ಬಲಿ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ. ಬಾಲಕನ ಅಜ್ಜ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆಯನ್ನು ಬಂಧಿಸಿ ಬಾಲಕನ ಶವದ ಪೋಸ್ಟ್‌ಮಾರ್ಟಂಗೆ ಪೊಲೀಸರು ಕಳುಹಿಸಿದ್ದಾರೆ ಎಂದುವರದಿಗಳು ತಿಳಿಸಿವೆ. ಭಾಮೌರಿಯ ಇಟ್ಟಿಗೆ ಭಟ್ಟಿಯ ಕಾರ್ಮಿಕ ಮಾಮಚಂದ್ ರಾರ್ಧನಾ ಅವರ ನಾಲ್ಕುವರ್ಷದ ಮಗು ಸೂರ್ಯ ಮನೆಯ ಹೊರಗೆ ಮಕ್ಕಳೊಂದಿಗೆ ಆಡುತ್ತಿದ್ದ ಅಲ್ಲಿಂದ ಅನಿರೀಕ್ಷಿತವಾಗಿ ನಾಪತೆಯಾಗಿದ್ದ. ಆನಂತರ ಅವನನ್ನು ಎಷ್ಟೇ ಹುಡುಕಾಡಿದರೂ ಅವನು ಪತ್ತೆಯಾಗಿರಲಿಲ್ಲ.

ಸಂಜೆಯಾಗುತ್ತಿದ್ದಂತೆ ಮನೆಯವರ ಪರಿಸ್ಥಿತಿ ನೋಡಿ ಗ್ರಾಮನಿವಾಸಿಗಳು ಕೂಡಾ ಬಾಲಕನ ಹುಡುಕಾಟ ನಡೆಸಿದರು. ಗ್ರಾಮದ ಧಾರ್ಮಿಕ ಸ್ಥಳವೊಂದರಲ್ಲಿ ಮಗು ನಾಪತ್ತೆಯಾದ ಕುರಿತುಘೋಷಣೆಯನ್ನೂ ಮಾಡಲಾಯಿತು. ನೆರೆಹೊರೆಯವರು ರಾಂನರೇಶ್‌ನ ಸಣ್ಣ ತಮ್ಮರೀನೂನ ಪತ್ನಿ ಸುಮನಾಳ ಮೇಲೆ ಶಂಕೆಯಿಂದ ಅವಳ ಮನೆಗೆ ನುಗ್ಗಿದಾಗ ಮಂಚದ ಕೆಳಗೆ ಮಗುವಿನ ಶವ ಪತ್ತೆಯಾಗಿತ್ತು. ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದ್ದು ಅವರು ಸುಮನಾಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಪ್ರಕರಣದ ಕುರಿತು ಹೇಳಿರುವ ಪ್ರಕಾರ ಸುಮನಾಳಿಗೆ ಒಬ್ಬಳು ಪುತ್ರಿ ಮಾತ್ರ ಇದ್ದುದರಿಂದ ತನ್ನ ಪತಿಯ ಅಣ್ಣನ ಪತ್ನಿಯೊಂದಿಗೆ ಅವಳಿಗೆ ಅಸೂಯೆ ಇತ್ತು. ಆದ್ದರಿಂದ ಅವಳು ಮಗುವಿನ ಕತ್ತು ಹಿಚುಕಿ ಕೊಲೆಗೈದಿದ್ದಾಳೆ ಎಂದು ಪೊಲೀಸರು ಹೇಳಿರುವುದಾಗಿವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News