×
Ad

ತನ್ನ ಪತ್ನಿಯನ್ನು ಹುಡುಕಿ ಕೊಡಿ: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ಗೆ ಹೈದರಾಬಾದಿಗನ ವಿನಂತಿ

Update: 2016-04-27 11:49 IST

ಹೈದರಾಬಾದ್ ಎಪ್ರಿಲ್, 27: ಇಲ್ಲಿನ ಬ್ಯಾಂಕ್ ಉದ್ಯೋಗಿಯೊಬ್ಬರು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾರಾಜೆ ಸಿಂಧಿಯಾರಿಗೆ ತನ್ನ ಪತ್ನಿಯನ್ನು ಹುಡುಕಿ ಕೊಡಬೇಕೆಂದು ವಿನಂತಿಸಿದ್ದಾರೆ. ವಿನಯ್‌ಬಾಬು ಎಂಬವರು 2013ರಲ್ಲಿ ಮಮತಾ ಎಂಬವರೊಡನೆ ವಿವಾಹವಾಗಿದ್ದರು. ಇದೊಂದು ಅಂತರಜಾತಿ ವಿವಾಹವಾಗಿತ್ತು. ಮಮತಾ ತವರು ರಾಜಸ್ಥಾನವಾಗಿದೆ. ಬಾಬು ಹೇಳುವ ಪ್ರಕಾರ ಮಮತಾರನ್ನು ತವರು ಮನೆಯವರು ಜೋಧಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮರಳಿ ಕಳುಹಿಸಿಲ್ಲ. ಈ ಕುರಿತು ಪೊಲೀಸರಿಗೂ ಅವರು ದೂರು ನೀಡಿದ್ದಾರೆ.

ವಿನಯ್‌ಬಾಬು ತನ್ನ ಪತ್ನಿ ಮಮತಾರೊಂದಿಗೆ ಯಾವುದಾದರೂ ಅಹಿತಕರ ಘಟನೆ ನಡೆದಿದೆಯೇ ಎಂದು ತನಗೆ ಆತಂಕ ಇದೆ ಎಂದು ಹೇಳುತ್ತಿದ್ದಾರೆ. ಮಮತಾ ಅವರೊಡನೆ ಫೋನ್‌ನಲ್ಲಿ ಕೂಡಾ ಮಾತಾಡುತ್ತಿಲ್ಲವಂತೆ. ವಿನಯ್ ಸಿಎಂ ವಸುಂಧರಾ ರಾಜೆಯವರೊಡನೆ ತನ್ನ ಪತ್ನಿ ಹುಡುಕಲು ತಮ್ಮ ನೆರವಿನಿಂದ ಮಾತ್ರ ಸಾಧ್ಯ ಎಂದು ವಿನಂತಿಸಿಕೊಂಡಿದ್ದಾರೆ. ಇತ್ತ ಮಮತಾರ ಮನೆಯವರು ಅವಳು ಮದುವೆಯಾದ ಬಳಿಕ ಮನೆಯಿಂದ ಚಿನ್ನ ತೆಗೆದುಕೊಂಡು ಓಡಿ ಹೋಗಿದ್ದಾಳೆ ಎಂದು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News