×
Ad

ಅಮಿತಾಭ್‌ರೇ ನೀವೆ ಸ್ವಯಂ ಮುಂದೆ ಬಂದು ತನಿಖೆ ಮಾಡಲು ಹೇಳಿ: ರಾಂದೇವ್ ಯೋಗಗುರು

Update: 2016-04-27 12:00 IST

ಹೊಸದಿಲ್ಲಿ, ಎಪ್ರಿಲ್ 27: ಯೋಗಗುರು ರಾಂದೇವ್‌ರು ಮಂಗಳವಾರ ಬಾಲಿವುಡ್ ಮೆಘಾಸ್ಟಾರ್ ಅಮಿತಾಭ್ ಬಚ್ಚನ್‌ರಿಗೆ ಉಚಿತ ಸಲಹೆ ನೀಡಿದ್ದಾರೆ. ಅವರು ಸ್ವಯಂ ಅಮಿತಾಭ್ ಬಚ್ಚನ್ ಮುಂದೆ ನಿಂತು ಈ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ತನಿಖೆ ನಡೆಸಲು ಹೇಳಬೇಕೆಂದು ಕಿವಿಮಾತು ಹೇಳಿದ್ದಾರೆ.ಯಾಕೆಂದರೆ ಪ್ರಾಮಾಣಿಕ ವ್ಯಕ್ತಿಗೆ ಯಾವ ಸ್ಥಿತಿಯಲ್ಲಿಯೂ ಹೆದರಿಕೆಯಿಲ್ಲ ಎಂದು ರಾಂದೇವ್ ಅಭಿಮತವಾಗಿದೆ.

ಅಮಿತಾಭ್ ಬಚ್ಚನ್ ಪನಾವುಪೇಪರ್ಸ್‌ನಲ್ಲಿ ಹೇಳಲಾದ ವಿದೇಶಿ ಕಂಪೆನಿಗಳೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದ್ದಾರೆ. ಆದ್ದರಿಂದ ಈ ಕುರಿತು ತನಿಖೆ ನಡೆಸಬೇಕೆಂದು ಅವರಿಗೆ ಹೇಳಬಹುದಾಗಿದೆ ಎಂದು ರಾಮ್ ದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಪ್ಪು ಹಣದ ಕುರಿತು ಪ್ರಸ್ತಾಪಿಸಿದ ಯೋಗಗುರು ನರೇಂದ್ರ ಮೋದಿ ಮೂರು ರಾಷ್ಟ್ರೀಯ ಪ್ರಜಾಪ್ರಭುತ್ವವಾದಿ ಮೈತ್ರಿ ಕೂಟ ಸರಕಾರದ ಭರವಸೆಯಿಟ್ಟು ವಿದೇಶಗಳಲ್ಲಿ ಇರುವ ಕಪ್ಪುಹಣವನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದ್ದರು ಎಂದು ರಾಮ್ ದೇವ್ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News