×
Ad

ಫ್ರೆಂಡ್ಸ್ ಉಚ್ಚಿಲ್: 'ಕಾಲ್ಚೆಂಡು' ಚಾಂಪಿಯನ್ ಟ್ರೋಫಿ- 2016

Update: 2016-04-27 15:06 IST

ಉಚ್ಚಿಲ, ಎ. 27: 'ಫ್ರೆಂಡ್ಸ್ ಉಚ್ಚಿಲ್' ಆಯೋಜಿಸಿದ್ದ ಚಾಂಪಿಯನ್ ಟ್ರೋಫಿ-2016 ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟವು ಎ. 22 ರಂದು ಬ್ರದರ್ಸ್ ಮೈದಾನ ಉಚ್ಚಿಲದಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಸೊಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್  ಉಚ್ಚಿಲ್ ಉದ್ಘಾಟಿಸಿದರು. ಮುನೀಶ್ ಮತ್ತು ತಂಡ ರಾಷ್ಟ್ರಗೀತೆ ಹಾಡಿದರು. ಅಬ್ದುಲ್ ಸಲಾಮ್ ಯು. ಸ್ವಾಗತಿಸಿದರು. 

ಬ್ಯಾರೀಸ್ ವೆಲ್ಫೇರ್ ಫೋರಂ ಅಬುದಾಭಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಉಚ್ಚಿಲ ಯು.ಆರ್. ಅಕಾಡಮಿ ಕೋಚ್ ಉಮೇಶ್ ಉಚ್ಚಿಲ, ಉಚ್ಚಿಲ ಬ್ರದರ್ಸ್ ತಂಡದ ಮಾಜಿ ಕೋಚ್ ನಾಗೇಶ್ ಉಚ್ಚಿಲ,  ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಮೊಯ್ದಿನ್ ಬಾವ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. 

ಸಮಾಜ ಸೇವಕ ಅಬ್ಬಾಸ್ ಉಚ್ಚಿಲ ರಿಯಾದ್, ತೊಕೊಟ್ಟೊ ಸುಪಾರ್ ಜವೆಲ್ಲರ್ಸ್ ನ ಇಸ್ಮಾಯೀಲ್ ನಾಗತೋಟ, ಸೊಮೇಶ್ವರ್ ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯೀಲ್ ಯು.ಎನ್., ಸೊಮೇಶ್ವರ್ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯು.ಕೆ. ಅಹ್ಮದ್ ಕುಂಞಿ, ಸಮಾಜ ಸೇವಕ ಯು.ಕೆ. ಆದಮ್ ಕುಂಞಿ ಈ ಸಂದರ್ಭ ಉಪಸ್ಥಿತರಿದ್ದರು. 

ನಾಸಿರ್ ಜಿ.ಎಂ., ಝಕೀರ್ ಜಿ.ಎಂ., ಆರಿಫ್, ಮಜೀದ್, ಸಲೀಮ್ ಮತ್ತು ಫ್ರೆಂಡ್ಸ್ ಉಚ್ಚಿಲ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News