700 ಅಡಿ ಆಳದಲ್ಲೂ ನೀರು ಸಿಗದೆ ತಾನು ತೋಡಿದ ಬಾವಿಗೇ ಹಾರಿ ಆತ್ಮಹತ್ಯೆ ಮಾಡಿಕೊಂಡ ಜಾರ್ಖಂಡ್ ವ್ಯಕ್ತಿ
Update: 2016-04-27 15:58 IST
ರಾಂಚಿ : ತನ್ನ ಮನೆಯ ಬಾವಿಯನ್ನು 700 ಅಡಿ ಆಳಕ್ಕೆ ತೋಡಿದ ಹೊರತಾಗಿಯೂ ನೀರು ಕಾಣದೆ ಕಂಗಾಲಾದ ವ್ಯಕ್ತಿಯೊಬ್ಬಅದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀವ್ರ ನೀರಿನ ಸಮಸ್ಯೆಯೆದುರಿಸುತ್ತಿರುವ ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯಿಂದವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ಪೂರ್ಣನಗರದ ದಿಲೀಪ್ ಯಾದವ್ ಎಂದು ಗುರುತಿಸಲಾಗಿದೆ.
ಯಾದವ್ ಮನೆ ಸಮೀಪದಲ್ಲಿದ್ದ ಬಾವಿಯ ನೀರು ಬಿಸಿಲಿನ ಝಳಕ್ಕೆ ಇಂಗಿ ಹೋಗಿದ್ದರಿಂದ ಅದನ್ನು ಮತ್ತಷ್ಟೂ ಆಳಗೊಳಿಸಲು ಆತ ರೂ 70,000 ಸಾಲ ಪಡೆದಿದ್ದ. ಆದರೆ 700 ಅಡಿ ತನಕ ಗುಂಡಿ ತೋಡಿದರೂ ನೀರು ಕಾಣದಾದಾಗದಿಕ್ಕು ತೋಚದಂತಾದಯಾದವ್ಆತ್ಮಹತ್ಯೆ ಮಾಡಿಕೊಂಡನೆಂದು ತಿಳಿದು ಬಂದಿದೆ.
ಜಾರ್ಖಂಡ್ ರಾಜ್ಯದ ಹಲವೆಡೆ ಬಿಸಿಲಿನ ಬೇಗೆಗೆ ನೀರಿನ ಅಭಾವ ತಲೆದೋರಿದ್ದು ಹಲವಾರು ನೀರಿನ ಮೂಲಗಳು ಇಂಗಿ ಹೋಗಿವೆ. ಹಲವೆಡೆ ಗ್ರಾಮದ ಜನತೆ ಕಲುಷಿತ ನೀರನ್ನೇ ಅವಲಂಬಿಸುವಂತಾಗಿದೆ.