×
Ad

ನಾಲ್ಕು ಒಲಿಂಪಿಕ್ ಅಥ್ಲೀಟ್ ಗಳ ತರಬೇತಿ ತಡೆದು ಸಲ್ಮಾನ್ ' ಸುಲ್ತಾನ್' ಶೂಟಿಂಗ್ ?

Update: 2016-04-27 18:55 IST

ಸಲ್ಮಾನ್ ಖಾನ್‌ರ ಚಿತ್ರದ ಶೂಟಿಂಗ್‌ನಿಂದ ನಾಲ್ವರು  ಅಥ್ಲೀಟ್‌ಗಳ  ಅಭ್ಯಾಸಕ್ಕೆ ಅಡ್ಡಿ...!

ಹೊಸದಿಲ್ಲಿ,ಎ.27: ರಿಯೋ ಒಲಿಂಪಿಕ್ಸ್‌ಗೆ ಬಾಲಿವುಡ್ ತಾರೆ ಸಲ್ಮಾನ್ ಖಾನ್ ಅವರನ್ನು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್‌ನ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಸಲ್ಮಾನ್ ಖಾನ್‌ರನ್ನು ಈ ಸ್ಥಾನಕ್ಕೆ ಯಾಕೆ ನೇಮಕ ಮಾಡಿದ್ದು, ಈ ಸ್ಥಾನವನ್ನು ತುಂಬಲು ಸಮರ್ಥ ಅಥ್ಲೀಟ್‌ಗಳು ಇಲ್ಲವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಸಲ್ಮಾನ್ ಖಾನ್ ನೇಮಕ ವಿವಾದ ಮುಂದುವರಿದಿದೆ. ಒಲಿಂಪಿಕ್ಸ್‌ಗೆ ಇನ್ನು 100 ದಿನ ಬಾಕಿ ಇದೆ. ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭಗೊಂಡಿದೆ. ಮತ್ತು ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸುತ್ತಿದ್ದಾರೆ. ಭಾರತದ ಒಲಿಂಪಿಕ್ಸ್ ಕ್ರೀಡಾಪಟುಗಳ ತಯಾರಿಗೆ ದಿಲ್ಲಿಯ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣ ಉತ್ತಮ ತಾಣ. ಆದರೆ ಇಲ್ಲಿ ಅಥ್ಲೀಟ್‌ಗಳ ತಯಾರಿಗೆ ಸಲ್ಮಾನ್ ಖಾನ್‌ರ ಶೂಟಿಂಗ್ ಅಡ್ಡಿಯಾಗಿದೆ. ಸಲ್ಮಾನ್ ಖಾನ್‌ರ ‘ಸುಲ್ತಾನ್’ ಚಿತ್ರದ ಶೂಟಿಂಗ್ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಲ್ವರು ಅಥ್ಲೀಟ್‌ಗಳು ರಿಯೋ ಒಲಿಂಪಿಕ್ಸ್‌ನ ತಯಾರಿ ನಿಲ್ಲಿಸಿದ್ದಾರೆ.
     'ಸ್ಪೋರ್ಟ್ಸ್‌ ಕೀಡಾ’ದಲ್ಲಿ ದಲ್ಲಿ ಪ್ರಕಟಗೊಂಡಿರುವ ವರದಿಯಂತೆ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ ನಾಲ್ವರು ಕ್ರೀಡಾಪಟುಗಳಿಗೆ ಭದ್ರತಾ ಸಿಬಂದಿಗಳು ಯಾವುದೇ ಮುನ್ಸೂಚನೆ ನೀಡದೆ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿರುವ ಸಲ್ಮಾನ್ ಖಾನ್‌ರ ಚಿತ್ರದ ಶೂಟಿಂಗ್‌ಗೆ ಅಡ್ಡಿಪಡಿಸದಂತೆ ಸೂಚಿಸಿದ್ದಾರೆ. ಒಲಿಂಪಿಕ್ಸ್‌ಗೆ ರಾಯಭಾರಿಯಾಗಿರುವ ಸಲ್ಮಾನ್ ಖಾನ್ ಚಿತ್ರದ ಶೂಟಿಂಗ್‌ನಿಂದಾಗಿ ಕ್ರೀಡಾಪಟುಗಳ ತಯಾರಿಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳು ಗರಂ ಆಗಿದ್ಧಾರೆ. ಸಲ್ಮಾನ್ ಖಾನ್ ಚಿತ್ರದ ಶೂಟಿಂಗ್‌ನಿಂದಾಗಿ ಒಲಿಂಪಿಕ್ಸ್‌ನ ತಯಾರಿಗೆ ಅಡ್ಡಿಯಾಗಿರುವುದು ಒಂದಡೆಯಾದರೆ 2016ರ ಫೆಡರೇಶನ್ ಕಪ್ ಸೀನಿಯರ್ ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಎ.28ರಿಂದ 30ರ ತನಕ ನಡೆಯಲಿರುವ ಟೂರ್ನಮೆಂಟ್‌ಗೂ ಸಲ್ಮಾನ್‌ರ ಶೂಟಿಂಗ್ ಅಡ್ಡಿಯಾಗಿದೆ. ಒಲಿಂಪಿಕ್ಸ್‌ನ ಗುರಿ ಹಾಕಿಕೊಂಡಿರುವ ಹಲವು ಕ್ರೀಡಾಪಟುಗಳ ತಮ್ಮ ಶಕ್ತಿ ಸಾಮರ್ಥ್ಯವನ್ನು ಪರೀಕ್ಷಿಸಲು ಫೆಡರೇಶನ್ ಕಪ್ ಸೀನಿಯರ್ ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅನುಕೂಲವಾಗಲಿದೆ. ಆದರೆ ಈ ಟೂರ್ನಮೆಂಟ್‌ಗೆ ಸಲ್ಮಾನ್ ಖಾನ್‌ರ ಚಿತ್ರ ಸುಲ್ತಾನ್ ಅಡ್ಡಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News