ಹಳೆಯಂಗಡಿ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; 4 ಮಂದಿಗೆ ಗಾಯ
Update: 2016-04-27 22:17 IST
ಮುಲ್ಕಿ, ಎ.27: ಕಾರೊಂದು ದಾರಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಗೋಡೌನ್ ವೊಂದಕ್ಕೆ ವರಗಿ ನಿಂತಿರುವ ಘಟನೆ ಹಳೆಯಂಗಡಿ ಪೇಟೆಯಲ್ಲಿ ನಡೆದಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ 4 ಮಂದಿಗೆ ಗಾಯಗಾಳಾಗಿದ್ದು ಎಲ್ಲರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಿದೆ.
ಉಡುಪಿಕಡೆಯಿಂದ ಮಂಗಳೂರು ಕಡೆಗೆ ಅತಿವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಇರಿಸಲಾಗಿದ್ದ ಬ್ಯಾರಿ ಗೇಟ್ ಅನ್ನು ತಪ್ಪಿಸಲು ಏಕಾ ಏಕಿ ಬ್ರೇಕ್ ಹಾಕಿದ ಪರಿಣಾಮ ಕಾರು ಹಲವು ಸುತ್ತು ಸುತ್ತಿ ದಾರಿದೀಪದ ಕಂಬಕ್ಕೆ ಹೊಡೆದು ಕೃಷ್ಣ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಅವರ ಕಾರಿಗೆ ಡಿಕ್ಕಿ ಹೊಡೆದು ಗೋಡೌನ್ ವೊಂದರ ಮೇಲೆ ಏರಿ ನಿಂತಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ದಾರಿ ದೀಪದ ಕಂಬ ತುಂಡಾಗಿದ್ದು, ಮನೆಯೊಂದರ ಮುಂದೆ ನಿಲ್ಲಿಸಲಾಗಿದ್ದ ಕಾರು ಜಖಂ ಗೊಂಡಿದೆ.