ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎ. 29ರಂದು ಸಾಮೂಹಿಕ ವಿವಾಹ.
ಬೆಳ್ತಂಗಡಿ: 1972 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆರಂ ಭಗೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಈಗ 45ರ ಸಂಭ್ರಮ. ಅನಗತ್ಯ ವೆಚ್ಚ ಕಡಿತಗೊಳಿಸಿ, ಸರಳ ರೀತಿಯಲ್ಲಿ ಮದುವೆ ನಡೆಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನ ಯೋಜನೆ ಈ ಸಾಮೂಹಿಕ ವಿವಾಹದ ಯೋಜನೆಯಾಗಿದೆ. ಬಡತನದ ಬೇಗೆಯಲ್ಲಿ ಬೇಯುವ ಕುಟುಂಬಗಳಿಗೆ ಸಾಂತ್ವನವಾಗಿ, ವರದಾನವಾಗಿ ಮಾಡಿಬಂದ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ ಇಂದು ನಾಡಿನ ಎಲ್ಲಾ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿದ್ದು ನಿರಂತರವಾಗಿ ನಡೆಯುತ್ತಾ ಬಂದಿದೆ.
ಇದೀಗ ಧರ್ಮಸ್ಥಳದಲ್ಲಿ 45ನೇ ವರ್ಷದ ಉಚಿತ ಸಾಮೂಹಿಕ ವಿವಾಹವು ಎ. 29ಶುಕ್ರವಾರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗೆಯವರಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದಲ್ಲಿರಾಜ್ಯ ಸರಕಾರದಮುಜರಾಯಿ ಸಚಿವ ಮನೋಹರ್ ತಹಶೀಲ್ದಾರ್, ಮಾಜಿ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್, ಶಾಸಕ ಕೆ. ವಸಂತ ಬಂಗೇರ, ಬಿರ್ಲಾ ಕಾರ್ಪೋರೇಶನ್‌ನ ಅಧಿಕಾರಿ ಆದಿತ್ಯ ಸರೋಗಿ ಮತ್ತು ಬೆಂಗಳೂರಿನ ಸಂದೇಶ ಮೆನನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ಬಾರಿ ಈಗಾಗಲೆ 125 ಜೊಡಿಗಳು ಮದುವೆಗೆ ನೋಂದಾವಣೆ ಮಾಡಿಕೊಂಡಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಈ ವರೆಗೆ 11800 ಜೋಡಿಗಳು ದಾಪಂತ್ಯಜೀವನವನ್ನು ಪ್ರವೇಶಿಸಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ ಮೂಲೆ ಮೂಲೆಗಳ ವಧೂವರರು ಇಲ್ಲಿ ದಾಂಪತ್ಯ ಪ್ರವೇಶಿಸುತ್ತಿದ್ದಾರೆ. 1972ರ ಮಾರ್ಚ್ 29ರಂದು ನಡೆದ ಪ್ರಥಮ ಸಾಮೂಹಿಕ ವಿವಾಹದಲ್ಲಿ 88 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವುದರೊಂದಿಗೆ ಹೊಸ ಇತಿಹಾಸ ನಿರ್ಮಾಣವಾಯಿತು. ಅಲ್ಲಿಂದೀಚೆಗೆ 2015ರವರೆಗೆ ಕ್ಷೇತ್ರದಲ್ಲಿ ಒಟ್ಟು 11800 ಜೋಡಿ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ದಂಪತಿಯ ಆಶೀರ್ವಾದದಿಂದ ವೈವಾಹಿಕ ಬದುಕನ್ನು ಕಂಡುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹಿಂದೂ ಧರ್ಮದ ಎಲ್ಲ ಜಾತಿಯವರು ಇಲ್ಲಿ ಒಮದೇ ವೇದಿಕೆಯಲ್ಲಿ ವಿವಾಹವಾಗುತ್ತಿರುವುದುಹಾಗೂ ಅಂತರ್ ಜಾತಿ ಜೋಡಿಗಳೂ ಇಲ್ಲಿ ವಿವಾಹಿತರಾಗುತ್ತಿರುವುದುವೈಶಿಷ್ಟ್ಯ.
ಸರಳ ವಿವಾಹ: ಮದುವೆ ಖರ್ಚು ಭರಿಸಲು ಸಾಧ್ಯವಾಗದ ಕುಟುಂಬಗಳಿಗೆ ನೆರವಾಗುವ ಉದ್ಧೇಶವೂ ಇದರ ಹಿಂದೆ ಇದೆ. ವೈವಾಹಿಕ ವೆಚ್ಚ ಕ ಡಿತಗೊಳಿಸುವಾಗ ಧಾರ್ಮಿಕ ವಿಧಿಗಳಿಗೆ ಚ್ಯುತಿಯಾಗದಂತೆ, ಸಾಂಸ್ಕೃತಿಕ ಪಾವಿತ್ರ್ಯವೂ ಉಳಿಯುವಂತೆ ನೋಡಿಕೊಳ್ಳಲಾಗಿದೆ. ಹಿರಿಯರ ಶುಭ ಹಾರೈಕೆಯೊಂದಿಗೆ ಎಲ್ಲರಿಗೂ ಒಪ್ಪುವಂತೆ ವಿಧಿ ವಿಧಾನಗಳು ನೆರವೇರಬೇಕು ಎಂಬುದನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಎರಡನೇ ವಿವಾಹಕ್ಕೆ ಇಲ್ಲಿ ಆಸ್ಪದವಿಲ್ಲ. ಕರಿಮಣಿ ತಾಳಿ, ವಧುವಿಗೆ ಸೀರೆ, ರವಿಕೆ ಕಣ, ವರನಿಗೆ ಶಾಲು, ಧೋತಿ, ಶರ್ಟ್ ಪೀಸ್ ಕ್ಷೇತ್ರದ ವತಿಯಿಂದ ನೀಡಲಾಗುತ್ತದೆ. ಊಟೋಪಚಾರ, ವಾಲಗ, ಮಂಟಪ ವ್ಯವಸ್ಥೆ ಕಲ್ಪಿಸಲಾಗುತ್ತದೆ.