ಮುಂಡಗೋಡ : ಗಟಾರದಲ್ಲಿ ತುಂಬಿದ ತಾಜ್ಯ
ಮುಂಡಗೋಡ : ಹುಬ್ಬಳ್ಳಿ-ಶಿರಸಿ ರಸ್ತೆಯ ಜಿಲ್ಲಾ ಪಂಚಾಯತ ಆವರಣದ ಗೋಡೆಗೆ ತಾಗಿರುವ ಗಟಾರ ಯಾವತ್ತೂ ಕಸದಿಂದ ತುಂಬಿ ತುಳುಕುತ್ತಿರುತ್ತದೆ ಇದಕ್ಕೆ ಪರಿಹಾರಕ್ಕೆ ನಿರ್ಮಿತಿ ಕೇಂದ್ರದವರು ಒಳಚರಂಡಿ ನಿರ್ಮಿಸಿ ಕೊಟ್ಟರೂ ನೀರು ತಾಜ್ಯಗಳು ಮುಂದೆ ಸಾಗದೇ ಬಂದು ಒಂದಡೆ ಸೇರುತ್ತಿರುವುದರಿಂದ ಸಾರ್ವಜನಿಕರು ಗಬ್ಬು ವಾಸನೆಯಿಂದ ಮುಗುಮುಚ್ಚಿಕೊಂಡು ಸಂಚರಿಸುವುದು ಅನಿವಾರ್ಯವಾಗಿದೆ.
ಗಟಾರ ನೀರು ಸರಾಗವಾಗಿ ಹರಿಯಲೆಂದು ನಿರ್ಮಿತಿ ಕೇಂದ್ರ ದವರು ರಸ್ತೆ ಅಗೆದು ಗಟಾರಗೆ ಒಳಚರಂಡಿ ನಿರ್ಮಿಸಿ ಬಲ ಭಾಗದ ಗಟಾರಗೆ ಜೋಡಣೆ ಮಾಡಿದರು ಆದರೆ ಗಟಾರನಲ್ಲಿ ಬರುವ ತಾಜ್ಯಗಳು ಬಂದು ಸೇರುತ್ತಿರುವುದರಿಂದ ಗಟಾರನೀರು ತಾಜ್ಯಗಳು ಜಮಾವಣೆಗೊಂಡು ನೀರು ಹರಿಯದಂತಾಗಿದೆ. ಇದಕ್ಕೆ ನಿರ್ಮಿತಿಕೇಂದ್ರವರು ನಿರ್ಮಿಸಿದ ಒಳಚರಂಡಿಯು ಸಮರ್ಪಕವಾಗಿಲ್ಲವೋ ಇಲ್ಲಾ ಪಟ್ಟಣ ಪಂಚಾಯತ ಮುಂಡಗೋಡ ದವರು ಇಲ್ಲಿ ತಾಜ್ಯಗಳನ್ನು ತೆಗೆಯಲು ಹಿಂದೇಟು ಹಾಕುತ್ತಿದ್ದಾರೊ ಎಂಬುದು ತಿಳಿದು ಬರಬೇಕಾಗಿದೆ. ಮಳೆಗಾಲ ಪ್ರಾರಂಭವಾಯಿತೆಂದರೆ ನೀರು ತಾಜ್ಯಗಳು ರಸ್ತೆಗೆ ಬಂದು ಬೀಳುವುದು ಶತಸಿದ್ದ.
ಈ ಕುರಿತು ಸಂಬಂದ ಪಟ್ಟ ಇಲಾಖೆಯವರು ಮುತುವರ್ಜಿವಹಿಸಿ ನೀರು ತಾಜ್ಯ ಹೋಗುವಂತೆ ಮಾಡಿ ಸಾರ್ವಜನಿಕರಿಗೆ ತೊಂದರೆ ಅಗದಂತೆ ನೋಡಿಕೊಳ್ಳಲಿ.