ಕೇರಳ ಚುನಾವಣೆಗಾಗಿ ಚು.ಆಯೋಗದಿಂದ ಮೊಬೈಲ್ ಆ್ಯಪ್

Update: 2016-04-28 15:10 GMT

ತಿರುವನಂತಪುರಂ,ಎ.28: ಮೇ.16ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗಾಗಿ ಸಮಗ್ರ ವಿವರಗಳನ್ನೊಳಗೊಂಡಿರುವ ಮೊಬೈಲ್ ಆ್ಯಪ್‌ನ್ನು ಚುನಾವಣಾ ಆಯೋಗವು ಬಿಡುಗಡೆಗೊಳಿಸಿದೆ.

 ಇ-ವೋಟರ್ ಹೆಸರಿನ ಈ ಆ್ಯಪ್‌ನ ಮೂಲಕ ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರುಗಳ ಶೋಧ,ಮತಗಟ್ಟೆಗಳ ತಾಣ ಗುರುತಿಸುವಿಕೆಯ ಜೊತೆಗೆ ಅಭ್ಯರ್ಥಿಗಳ ಬಗ್ಗೆ ಮಾಹಿತಿ,ಅವರು ಸಲ್ಲಿಸಿರುವ ಪ್ರಮಾಣಪತ್ರಗಳಲ್ಲಿನ ವಿವರಗಳನ್ನು ಮತದಾರರು ಪಡೆದುಕೊಳ್ಳಬಹುದು. ಈ ಆ್ಯಪ್ ದೂರು ಸಲ್ಲಿಕೆ ಇತ್ಯಾದಿಗಳಿಗೂ ನೆರವಾಗಲಿದೆ.

ಹೆಚ್ಚಿನ ಪಾರದರ್ಶಕತೆ ಹಾಗೂ ಮುಕ್ತ ಮತ್ತು ನ್ಯಾಯಯುತ ಚುನಾವಣೆ ಈ ಆ್ಯಪ್‌ನ ಉದ್ದೇಶವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಗುರುವಾರ ಹೇಳಿಕೆಯೊಂದರಲ್ಲಿ ತಿಳಿಸಿದರು.

ಇ-ವೋಟರ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಮತ್ತು ಯಾವುದೇ ಆಂಡ್ರಾಯ್ಡಾ ಫೋನಿನಲ್ಲಿ ಅಳವಡಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News