ಮಂಗಳೂರು: ಚಿನ್ನದ ಸರ ಕಳ್ಳತನ
Update: 2016-04-28 22:56 IST
ಮಂಗಳೂರು,ಮಾ.28: ನಗರದ ಸುಭಾಷ್ ನಗರ ರಸ್ತೆಯ ಬದಿಯಲ್ಲಿರುವ ಅಂಗಡಿಯೊಂದರಲ್ಲಿ ಸಾಮಾಗ್ರಿಯನ್ನು ಖರೀದಿ ಮಾಡುತ್ತಿದ್ದ ರೋಸ್ ಮಿನಾ ಕೆನಡಿ ಎಂಬವರ ಚಿನ್ನದ ಸರವನ್ನು ಅಪರಿಚಿತನೊಬ್ಬ ಕಿತ್ತು ಪರಾರಿಯಾಗಿದ್ದಾನೆ. ಮಹಿಳೆಯು ಅಂಗಡಿಯಲ್ಲಿ ಸಾಮಾಗ್ರಿ ಖರೀದಿ ಮಾಡುತ್ತಿದ್ದ ಸಂದರ್ಭದಲ್ಲಿ ಅದೇ ಅಂಗಡಿಯಲ್ಲಿ ತಂಪು ಪಾನೀಯ ಕುಡಿಯುತ್ತಿದ್ದ ಆರೋಪಿ ಈ ಕೃತ್ಯವೆಸಗಿದ್ದಾನೆ.
ಸುಮಾರು 30 ಸಾವಿರ ವೌಲ್ಯದ ಚಿನ್ನದ ಕ್ರಾಸ್ ಮಾರ್ಕ್ ಪೆಂಡೆಂಟ್ ಇರುವ ಒಟ್ಟು 2 ಪವನ್ ತೂಕದ ಚಿನ್ನದ ಸರವನ್ನು ಆರೋಪಿ ಕಿತ್ತುಕೊಂಡು ಹೋಗಿದ್ದಾನೆ.ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.