ಮಂಗಳೂರು: ಸರಗಳ್ಳತನಗೈದ ಆರೋಪಿ ಬಂಧನ
Update: 2016-04-28 22:57 IST
ಮಂಗಳೂರು, ಎ.28: ಬಿಕರ್ನಕಟ್ಟೆ ಬಳಿ ಮಹಿಳೆಯೊಬ್ಬರ ಸರಗಳ್ಳತನ ಮಾಡಿದ ಆರೋಪದಲ್ಲಿ ಉರ್ವದ ರಜನಿಕಾಂತ್ ಎಂಬ ಆರೋಪಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಎ.22 ರಂದು ಬಿಕರ್ನಕಟ್ಟೆ ಬಳಿ ನಡೆದುಕೊಂಡು ಹೋಗುತ್ತಿದ್ದ ಜಾನ್ಸಿ ಎಂಬವರ ಸುಮಾರು 20 ಸಾವಿರ ವೌಲ್ಯದ ಚಿನ್ನದ ಸರವನ್ನು ಕುತ್ತಿಗೆಗೆ ಕೈಹಾಕಿ ಕಿತ್ತುಕೊಂಡು ಹೋಗಿದ್ದ. ಆರೋಪಿ ರಜನಿಕಾಂತ್‌ನನ್ನು ಇಂದು ಬಂಧಿಸಿದ ಪೊಲೀಸರು ಆತನಿಂದ ಕಳವುಗೈದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ವಿರುದ್ದ ಬರ್ಕೆ ಠಾಣೆಯಲ್ಲಿ ಲೈಂಗಿಕ ಕಿರುಕುಳವು ದಾಖಲಾಗಿರುವ ಬಗ್ಗೆ ಕದ್ರಿ ಪೊಲೀಸರು ಮಾಹಿತಿಯನ್ನು ಕಲೆಹಾಕಿದ್ದು ತನಿಖೆ ನಡೆಸುತ್ತಿದ್ದಾರೆ.