×
Ad

ಮಂಗಳೂರು: ನಿದ್ದೆಗೆ ಜಾರಿದ ವ್ಯಕ್ತಿಯೊಬ್ಬರ ಅಂಗಿಯ ಕಿಸೆಯಿಂದ ರೂ.30 ಸಾವಿರ ನಗದು ಕಳ್ಳತನ

Update: 2016-04-28 23:10 IST

ಮಂಗಳೂರು, ಎ.28: ನಗರದ ಪುರಭವನದ ಬಳಿಯಿರುವ ಗಾಂಧಿ ಪಾರ್ಕ್‌ನಲ್ಲಿ ನಿದ್ದೆಗೆ ಜಾರಿದ ವ್ಯಕ್ತಿಯೊಬ್ಬರ ಅಂಗಿಯ ಕಿಸೆಯಿಂದ ರೂ.30 ಸಾವಿರ ನಗದನ್ನು ಕಳ್ಳತನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಎಮ್. ಇ. ಇಬ್ರಾಹೀಂ ಎಂಬವರು ಎ.27 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಗಾಂಧಿ ಪಾರ್ಕ್‌ನಲ್ಲಿ ಕುಳಿತುಕೊಂಡಿದ್ದು ಈ ಸಂದರ್ಭದಲ್ಲಿ ನಿದ್ದೆಗೆ ಜಾರಿದ್ದರು. ಎಚ್ಚರವಾಗಿ ನೋಡಿದಾಗ ಅವರ ಕಿಸೆಯಲ್ಲಿದ್ದ 30 ಸಾವಿರವನ್ನು ಯಾರೋ ಕಳ್ಳರು ಕಳ್ಳತನಗೈದಿದ್ದಾರೆ. ಈ ಬಗ್ಗೆ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News