ಮಂಗಳೂರು: ಬ್ರಾಂಡೆಡ್ ಕಂಪೆನಿಗಳ ಹೆಸರಿನಲ್ಲಿ ನಕಲಿ ಬ್ಯಾಗ್ ಮಾರಾಟ
Update: 2016-04-28 23:13 IST
ಮಂಗಳೂರು,ಎ.28: ನಗರದಲ್ಲಿ ಬ್ರಾಂಡೆಡ್ ಕಂಪೆನಿಗಳ ಹೆಸರಿನಲ್ಲಿ ನಕಲಿ ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಿರುವ ನಗರದ ಲೇಟೆಸ್ಟ್ ಬ್ಯಾಗ್ ಮತ್ತು ಶೃಂಗಾರ ಬ್ಯಾಗ್ ಮತ್ತು ಮಹಾದೇವ ಬ್ಯಾಗ್ ಎಂಬ ಹೆಸರಿನ ಅಂಗಡಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಪಾಸ್ಟ್ ಟ್ರಾಕ್ ಮತ್ತು ಅಮೇರಿಕನ್ ಟ್ಯೂರಿಸ್ಟ್ ಎಂಬ ಹೆಸರಿನ ಕಂಪನಿಗಳ ಬ್ಯಾಗ್ ಗಳನ್ನು ನಕಲಿ ಮಾಡಿ ನಕಲಿ ಬ್ಯಾಗ್ ಗಳನ್ನು ಅಸಲಿ ಎಂದು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ.