ಚುಟುಕು ಸುದ್ದಿಗಳು
ಇಂದು ಸ್ನೇಹಸಾಗರ ಕಾರ್ಯಕ್ರಮ
ಕಾಸರಗೋಡು,ಎ.28: ಅಸಹಿಷ್ಣುತೆ ವಿರುದ್ಧ ಸುನ್ನಿ ಮಹಲ್ ಫೆಡರೇಶನ್ ಕಾಸರಗೋಡು ಜಿಲ್ಲಾ ಸಮಿತಿಯು ಎ.29ರಂದು ಕಾಸರಗೋಡಿನಲ್ಲಿ ಮಾನಿಶಾದ್ ಸ್ನೇಹಸಾಗರ ಕಾರ್ಯಕ್ರಮ ಆಯೋಜಿಸಿದೆ ಎಂದು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಜೆ 3 ಗಂಟೆಗೆ ವಿದ್ಯಾನಗರ ನಗರಸಭಾ ಸ್ಟೇಡಿಯಂನಲ್ಲಿ ನಡೆ ಯುವ ಕಾರ್ಯಕ್ರಮವನ್ನು ಸ್ವಾಮಿ ಅಗ್ನಿವೇಶ್ ಉದ್ಘಾಟಿಸುವರು. ಸುದ್ದಿಗೋಷ್ಠಿಯಲ್ಲಿ ಎಸ್‌ಎಂಎಫ್ ಅಧ್ಯಕ್ಷ ಚೆರ್ಕಳಂ ಅಬ್ದುಲ್ಲ, ಪ್ರಧಾನ ಕಾರ್ಯದರ್ಶಿ ಡಾ.ಕತರ್ ಇಬ್ರಾಹೀಂ ಹಾಜಿ , ಉಪಾ ಧ್ಯಕ್ಷ ಟಿ.ಕೆ. ಪೂಕೋಯ ತಂಙಳ್ ಉಪಸ್ಥಿತರಿದ್ದರು.
ಉಚಿತ ನೇತ್ರ ತಪಾಸಣಾ ಶಿಬಿರ
ಪುತ್ತೂರು, ಎ.28: ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆ ಎಂಪ್ಲಾ ಯೀಸ್ ಯೂನಿಯನ್(ಹಿಂದುಸ್ತಾನ್ ಮಜ್ದೂರ್ ಸಭಾದ ಸಂಯೋಜಿತ ) ವತಿಯಿಂದ ಪ್ರಸಾದ್ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಉಡುಪಿ, ದಕ್ಷಿಣ ಕನ್ನಡ, ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದಲ್ಲಿ ಮೇ ದಿನಾಚರಣೆ ಮತ್ತು ಉಚಿತ ನೇತ್ರ ತಪಾಸಣಾ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಮೇ 1ರಂದು ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆ ಆವರಣದಲ್ಲಿ ನಡೆಯಲಿದೆ ಎಂದು ಯೂನಿಯನ್ ಉಪಾಧ್ಯಕ್ಷ ನಿರಂಜನ ಎಂ.ಎಸ್. ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯೂನಿಯನ್ ಸದಸ್ಯರಿಗಾಗಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ಬಹುಮಾನಗಳನ್ನು ಈ ಸಂದರ್ಭ ವಿತರಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಪದ್ಮಶೇಖರ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ಮೇ 3: ಅಹವಾಲು ಸ್ವೀಕಾರ
ಮೂಡುಬಿದಿರೆ, ಎ.28: ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲನ್ನು ಮೇ 3 ರಂದು ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ಸ್ವೀಕರಿ ಸಲಿರುವರು. ಸಾರ್ವಜನಿಕರು ಮೂಡುಬಿದಿರೆ ತಾಲೂಕಿಗೆ ತಮ್ಮ ಅಹವಾಲುಗಳನ್ನು ನೀಡಬಹುದೆಂದು ಮೂಡುಬಿದಿರೆ ತಹಶೀ ಲ್ದಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೇ 8: ಮಿಸ್ ಕರ್ನಾಟಕ ಸ್ಪರ್ಧೆ
ಮೂಡುಬಿದಿರೆ, ಎ.28: ಕರ್ನಾಟಕದ ಮಹಿಳಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಮೇ 8 ರಂದು ಮೂಡುಬಿದಿರೆಯ ಪಂಡಿತ್ ರೆಸಾರ್ಟ್‌ನಲ್ಲಿ ಮಿಸ್ ಕರ್ನಾಟಕ 2016 ಸ್ಪರ್ಧೆ ನಡೆಯಲಿದೆ ಎಂದು ಚರಣ್ ಸುವರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕದ ಯುವ ಜನಾಂಗ ಸಂಸ್ಕೃತಿ, ಸಂಪ್ರದಾಯ, ನಂಬಿಕಾರ್ಹ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಪಾಕೃತಿಕ ಸೊಬಗನ್ನು ತೋರ್ಪಡಿಸುವ ನಿಟ್ಟಿನಲ್ಲಿ ಸ್ಪರ್ಧೆಯನ್ನು ಆಯೋ ಜಿಸಲಾಗಿದ್ದು, ವಿಜೇತರು ನೇರವಾಗಿ ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್‌ಗೆ ಪ್ರವೇಶ ಹೊಂದಲಿದ್ದಾರೆ. ಕರ್ನಾಟಕದ ಸಂಸ್ಕೃತಿ, ಸಂಪ್ರದಾಯದ ಮೇಲೆ ಸಂಪೂರ್ಣವಾಗಿ ಬೆಳಕು ಚೆಲ್ಲಲಿದ್ದು, ಯೋಗಧ್ಯಾನ, ವ್ಯಕ್ತಿತ್ವ ಬೆಳವಣಿಗೆ, ಪ್ರಶ್ನಾವಳಿ ಸುತ್ತು, ಕ್ಯಾಟ್‌ವಾಕ್, ಸೌಂದರ್ಯ ಸಲಹೆ, ಛಾಯಾಚಿತ್ರ, ಸಂವಾದ ಸೇರಿದಂತೆ ವಿವಿಧ ವಿಧಾನಗಳ ಬಳಕೆಯೊಂದಿಗೆ ಸ್ಪರ್ಧಾ ಳುಗಳ ಪ್ರತಿಭೆಯನ್ನು ಬೆಳಕಿಗೆ ತರಲಾಗುತ್ತದೆ. ನುರಿತ ಪ್ಯಾಶನ್ ತಜ್ಞರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಕೊನೆಯ ಸುತ್ತನ್ನು ಕೇಂದ್ರ ಸಚಿವ ಜಿ.ಎಂ.ಸಿದ್ಧೇಶ್ವರ ಉದ್ಘಾಟಿಸಲಿದ್ದಾರೆ. ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ ಪಾಲ್ಗೊಳ್ಳಲಿದ್ದಾರೆ. ಕೊನೆಯ ಸುತ್ತಿನ 12 ಮಂದಿ ರ್ಯಾಂಪ್ ವಾಕ್‌ನಲ್ಲಿ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಂಡಿತ್ ರೆಸಾರ್ಟ್‌ನ ಲಾಲ್ ಗೋಯೆಲ್, ರೂಬಿ ಅಗರ್‌ವಾಲ್, ತುಳು ಚಲನಚಿತ್ರ ನಟಿ ಸೋನಲ್ ಮೊಂತೆರೊ ಉಪಸ್ಥಿತರಿದ್ದರು.
ಕಚೇರಿ ಸ್ಥಳಾಂತರ
ಮಂಗಳೂರು, ಎ.28: ಮಂಗಳೂರು-ಹಾಸನ-ಮೈಸೂರು-ಸೋಲೂರು ಗ್ಯಾಸ್ ಪೈಪ್‌ಲೈನ್ ಯೋಜನೆಯ ಸಕ್ಷಮ ಪ್ರಾಧಿ ಕಾರಿಗಳು ಹಾಗೂ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಯನ್ನು ಸುರತ್ಕಲ್‌ನ ಬಾಳ ಬಳಿಯ ಎಚ್‌ಪಿಸಿಎಲ್ ಮೈನ್ ಡಿಸ್ಪಾಚ್ ಸ್ಟೇಶನ್ ಬಳಿಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
ಚುನಾವಣೆ: ಕಾಸರಗೋಡಿನಲ್ಲಿ 30 ನಾಮಪತ್ರಗಳು ಸಲ್ಲಿಕೆ
ಕಾಸರಗೋಡು, ಎ.28: ಮೇ 16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎ.29 ಕೊನೆ ದಿನವಾಗಿದ್ದು, ಇದುವರೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 30 ನಾಮಪತ್ರಗಳು ಸಲ್ಲಿಕೆಯಾಗಿವೆ. ಗುರುವಾರ ಐದು ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ. ಎ.30ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 2ರ ತನಕ ನಾಮಪತ್ರ ಹಿಂದೆಗೆದುಕೊಳ್ಳಲು ಅವಕಾಶವಿದೆ.
ಚೆಂಬರಿಕ ಖಾಝಿ ನಿಗೂಢ ಮರಣ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹಿಸಿ ನಾಳೆಯಿಂದ ಧರಣಿ
ಕಾಸರಗೋಡು, ಎ.28: ಮಂಗಳೂರು- ಚೆಂಬರಿಕ ಖಾಝಿಯಾಗಿದ್ದ ಸಿ.ಎಂ.ಅಬ್ದುಲ್ಲ ವೌಲವಿಯವರ ನಿಗೂಡ ಮರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆಳೆಯುವಂತೆ ಒತ್ತಾಯಿಸಿ ಖಾಝಿಯವರ ಕುಟುಂಬಸ್ಥರು ಮತ್ತು ಜನಪರ ಕ್ರಿಯಾ ಸಮಿತಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ.
ಎ.30ರಂದು ಅಪರಾಹ್ನ 3ಕ್ಕೆ ಕಾಸರಗೋಡು ಹೊಸಬಸ್ ನಿಲ್ದಾಣ ಪರಿಸರದಲ್ಲಿ ಸತ್ಯಾಗ್ರಹಕ್ಕೆ ಪರಿಸರ ಹೋರಾಟಗಾರ ಸಿ.ಆರ್.ನೀಲಕಂಠನ್ ಉದ್ಘಾಟಿಸುವರು ಎಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಡಾ.ಡಿ.ಸುರೇಂದ್ರನಾಥ್, ಸಿದ್ದೀಕ್ ನದ್ವಿ, ಸಿ.ಎಂ. ಮುಹಮ್ಮದ್ ಶಾಫಿ, ಅಬ್ದುಲ್ ಖಾದರ್ ಸಅದಿ, ಇ.ಅಬ್ದುಲ್ ಕುಂಞಿ, ಅಬ್ದುಲ್ ಖಾದರ್ ಚಟ್ಟಂಚಾಲ್ ಮತ್ತಿತರರು ಉಪಸ್ಥಿತರಿದ್ದರು.
ಬೈಕ್ ಢಿಕ್ಕಿ: ಪಾದಚಾರಿಗೆ ಗಾಯ
ಸುರತ್ಕಲ್, ಎ.28: ಬೈಕ್ ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಹೊಸಬೆಟ್ಟು ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಅಶೆಲ್ ಬಸ್‌ನ ಮ್ಯಾನೇಜರ್, ಕೃಷ್ಣಾಪುರ ನಿವಾಸಿ ಮುಹಮ್ಮದ್ ಶರೀಫ್ ಗಾಯಗೊಂಡವರು. ಅವರು ಹೊಸಬೆಟ್ಟು ಪಂಪ್ ಬಳಿ ಬಸ್‌ನ ಕಲೆಕ್ಷನ್‌ನ ಹಣ ಪಡೆಯಲು ರಸ್ತೆ ದಾಟುತ್ತಿದ್ದ ವೇಳೆ ಏಕಾಏಕಿ ಬೈಕ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ವೇಳೆ ರಸ್ತೆಗೆ ಬಿದ್ದ ಶರೀಫ್‌ರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಸುರತ್ಕಲ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಗರಕರ್ಯ ವಾರ್ಷಿಕ ಸ್ವಲಾತ್
ಮೂಡುಬಿದಿರೆ, ಎ.28: ಇಲ್ಲಿಗೆ ಸಮೀ ಪದ ಅಂಗರಕರ್ಯ ಮುಹಿಯುದ್ದೀನ್ ಜುಮಾ ಮಸೀದಿಯ ವಾರ್ಷಿಕ ಸ್ವಲಾತ್ ಕಾರ್ಯಕ್ರಮವು ಮೇ 1ರಂದು ಅಸಾಸುಲ್ ಇಸ್ಲಾಂ ಮದ್ರಸ ವಠಾರದ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಅಂದು ಮಗ್ರಿಬ್ ನಮಾಝಿನ ಬಳಿಕ ಜಮಾಅತಿನ ಗೌರವಾಧ್ಯಕ್ಷ, ಅತ್ರಾಡಿ ವಾಲ್ಪಾಡಿ ಖಾಝಿ ಶೈಖುನಾ ಅಲ್‌ಹಾಜ್ ವಿ.ಕೆ ಅಬೂಬಕರ್ ಮುಸ್ಲಿಯಾರ್‌ರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಅಸೈಯದ್ ಕೆ.ಎಸ್. ಅಲಿ ತಂಙಳ್ ಕುಂಬೋಳ್ ದುಆ ಆಶೀರ್ವಚನ ನೀಡಲಿದ್ದಾರೆ. ಜಮಾಅತಿನ ಅಧ್ಯಕ್ಷ ನಝೀರ್ ಅಹ್ಮದ್ ಅಧ್ಯಕ್ಷತೆ ವಹಿಸುವರು.
ಮೇ 14: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಾರ್ಯಕ್ರಮ
ಸುಳ್ಯ, ಎ.28: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವತಿಯಿಂದ ವಿಷು ವಿಶೇಷ ಸ್ಪರ್ಧೆಯ ಬಹು ಮಾನ ವಿತರಣೆ, ಬಾಳಿಲ ಪರಮೇಶ್ವರಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಕುರು ಕ್ಷೇತ್ರಕ್ಕೊಂದು ಆಯೋಗ ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಮೇ 14ರಂದು ಅಪರಾಹ್ನ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಖಜಾಂಚಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹವ್ಯಕ ಭಾಷಾ ಸಾಹಿತ್ಯ ಬೆಳವಣಿಗೆಗಾಗಿ ಕಥೆ, ಪ್ರಬಂಧ, ಕವನ, ನಗೆಬರಹ ಹಾಗೂ ವ್ಯಂಗ್ಯಚಿತ್ರ ವಿಭಾಗಗಳಲ್ಲಿ ನಡೆಸಿದ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವುದರ ಜೊತೆಗೆ ಹವ್ಯಕ ಭಾಷೆಯಲ್ಲಿ ‘ಧರ್ಮ ವಿಜಯ’ ಎಂಬ ಮಹಾಕಾವ್ಯವನ್ನು ರಚಿಸಿದ ದಿ. ಬಾಳಿಲ ಪರಮೇಶ್ವರ ಭಟ್‌ರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಬಾಳಿಲ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಹರಿಕೃಷ್ಣ ಭರಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಸಾಮಾಜಿಕ-ಧಾರ್ಮಿಕ ಧುರೀಣ ಆನೆಕಾರ ಗಣಪಯ್ಯರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಗಿರೀಶ್ ಭಾರದ್ವಾಜ್ ಹಾಗೂ ಮಡಿಕೇರಿ ಆಕಾಶ ವಾಣಿಯ ಸುಬ್ರಾಯ ಸಂಪಾಜೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂ.ಎನ್.ವೆಂಕಟಕೃಷ್ಣ , ಕುಮಾರಸ್ವಾಮಿ ತೆಕ್ಕುಂಜ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶಾಲಿನಿ ಸೇವಾ ಪ್ರತಿಷ್ಠಾನ ಉದ್ಘಾಟನೆ
ಬೆಳ್ತಂಗಡಿ, ಎ.28: ಲಾಲ ಶ್ರೀಗುರು ರಾಘವೇಂದ್ರ ಮಠದಲ್ಲಿ ಮೇ 3ರಂದು ಶಾಲಿನಿ ಸೇವಾ ಪ್ರತಿಷ್ಠಾನದ ಉದ್ಘಾಟನೆ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ತಾರಾನಾಥ ಶೆಟ್ಟಿ ಗುಜ್ಜೊಟ್ಟು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲಾಲ ಗ್ರಾಮದ ಪೆರಿಂದಲೆಯಲ್ಲಿ ಜನಿಸಿದ ಶಾಲಿನಿಯನ್ನು ತಾರಾನಾಥ ಶೆಟ್ಟಿಗೆ ವಿವಾಹ ಮಾಡಿಕೊಡಲಾಗಿತ್ತು. ಮುಂಬೈಯಲ್ಲಿ ವಾಸವಿದ್ದ ಈ ದಂಪತಿಯ ಮನೆಗೆ ಆಗಮಿಸಿದ ಬಂಧು ಶಾಲಿನಿಯ ಹತ್ಯೆ ಮಾಡಿ ನಗ, ನಗದು ದೋಚಿದ್ದ. ಆರೋಪಿಯ ಬಂಧನವಾದರೂ ಕೇಸು ಖುಲಾಸೆಯಾಗಿತ್ತು. ಈಕೆಯ ಹೆಸರು ಶಾಶ್ವತವಾಗಿ ಉಳಿಯ ಬೇಕೆಂದು ಶಾಲಿನಿ ಪ್ರತಿಷ್ಠಾನ ಆರಂಭಿಸಲಾಗುತ್ತಿದೆ. ಸಂಸ್ಥೆಯ ವತಿ ಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ, ಪುಸ್ತಕ ವಿತರಣೆ, ಬಡ ಮಕ್ಕಳ ದತ್ತು ಸ್ವೀಕಾರ, ಬಡ ರೋಗಿಗಳಿಗೆ ವೈದ್ಯಕೀಯ ನೆರವು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಮೇ 3ರಂದು ಯು. ವಿಜಯ ರಾಘವ ಪಡ್ವೆಟ್ನಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಲಿದ್ದು, ಚಿತ್ತರಂಜನ್ ಶೆಟ್ಟಿ ಪ್ರತಿಷ್ಠಾನ ಉದ್ಘಾಟಿಸಲಿದ್ದಾರೆ. ಹರೀಶ್ ಪೂಂಜ, ರಘುರಾಮ ಶೆಟ್ಟಿ ಉಜಿರೆ, ಸದಾನಂದ ಸುವರ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜ್ಯೋತಿ ನವಮಣಿ ಸೋನ್ಸ್‌ರಿಗೆ ಶಾಲಿನಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಿಇಟಿ: ಹಿಂದುಳಿದ ವರ್ಗದವರಿಗೆ ಸಾಲ ಸೌಲಭ್ಯ
ಮಂಗಳೂರು, ಎ.28: ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಮೂಲಕ ಸೀಟು ಪಡೆದು ಬಿ.ಇ., ಎಂ.ಬಿ.ಬಿ.ಎಸ್., ಬಿ.ಯು.ಎಂ.ಎಸ್., ಬಿ.ಡಿ.ಎಸ್., ಬಿ.ಎ.ಎಂ.ಎಸ್., ಬಿ.ಎಚ್.ಎಂ.ಎಸ್., ಎಂ.ಸಿ.ಎ., ಎಂ.ಎಸ್(ಅಗ್ರಿ), ಮುಂತಾದ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ 1 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗುತ್ತದೆ. 2016-17ನೆ ಸಾಲಿಗೆ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು. ಸಿ.ಇ.ಟಿ. ಗೆ ಪಾವತಿಸಬೇಕಾದ ಶುಲ್ಕ ವನ್ನು ಸಿ.ಇ.ಟಿ.ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ, ಸಿ.ಇ.ಟಿ.ಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. 2016-17ನೆ ಸಾಲಿನಲ್ಲಿ ಸಿ.ಇ.ಟಿ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಲು ನಿಗಮದಿಂದ ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ 1, ಪ್ರವರ್ಗ 2ಎ (ವಿಶ್ವಕರ್ಮ ಮತ್ತು ಉಪಜಾತಿಗಳನ್ನು ಹಾಗೂ ಮತೀಯ ಅಲ್ಪ ಸಂಖ್ಯಾತರನ್ನು ಹೊರತುಪಡಿಸಿ), ಪ್ರವರ್ಗ 3ಎ ಮತ್ತು ಪ್ರವರ್ಗ 3ಬಿ ಗೆ ಸೇರಿದ್ದು, ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನ 3.50 ಲಕ್ಷ ರೂ.ಗಳ ಮೀತಿಯಲ್ಲಿರುವ ವಿದ್ಯಾರ್ಥಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಾಲ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಜಿಲ್ಲಾ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗ ಗಳ ಅಭಿವೃದ್ಧಿ ನಿಗಮ, ದೇವರಾಜ ಅರಸು ಭವನ, ರೇಡಿಯೋ ಪಾರ್ಕ್, ಉರ್ವಸ್ಟೋರ್ ಮಂಗಳೂರು-06. ಅಥವಾ ನಿಗಮದ ವೆಬ್‌ಸೈಟ್ ಡಿಡಿಡಿ.ಚ್ಟ್ಞಠಿ.ಜಟ.ಜ್ಞಿ/ಚ್ಚಿಛ್ಚರಲ್ಲಿ ಪಡೆದು ಅಗತ್ಯ ದಾಖಲೆ ಗಳೊಂದಿಗೆ ಮೇ 20ರೊಳಗೆ ಸಲ್ಲಿಸಬೇಕು ಎಂದು ಪ್ರಕಟನೆೆ ತಿಳಿಸಿದೆ.
ಕಿಸೆಯಿಂದ ನಗದು ಕಳವು: ದೂರು
ಮಂಗಳೂರು, ಎ.28: ನಗರದ ಪುರಭವನದ ಬಳಿಯಿರುವ ಗಾಂಧಿ ಪಾರ್ಕ್‌ನಲ್ಲಿ ನಿದ್ದೆಗೆ ಜಾರಿದ ವ್ಯಕ್ತಿಯೊಬ್ಬರ ಅಂಗಿಯ ಕಿಸೆಯಿಂದ 30 ಸಾವಿರ ರೂ.ನ್ನು ಕಳ್ಳತನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಎಂ.ಇ.ಇಬ್ರಾಹೀಂ ಎಂಬವರು ಎ.27ರಂದು ಬೆಳಗ್ಗೆ 10ರ ಸುಮಾರಿಗೆ ಗಾಂಧಿ ಪಾರ್ಕ್‌ನಲ್ಲಿ ಕುಳಿತುಕೊಂಡಿದ್ದ ವೇಳೆ ನಿದ್ದೆಗೆ ಜಾರಿದ್ದರು. ಎಚ್ಚರಗೊಂಡಾಗ ಅವರ ಕಿಸೆಯಲ್ಲಿದ್ದ ಹಣವನ್ನು ಕಳ್ಳರು ಎಗರಿಸಿದ್ದಾರೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದ್ದಾರೆ.
ನಕಲಿ ಬ್ಯಾಗ್‌ಗಳ ಮಾರಾಟ: ಮೂರು ಅಂಗಡಿಗಳ ವಿರುದ್ಧ ದೂರು
ಮಂಗಳೂರು, ಎ.28: ನಗರದಲ್ಲಿ ಬ್ರಾಂಡೆಡ್ ಕಂಪೆನಿಗಳ ಹೆಸರಿನಲ್ಲಿ ನಕಲಿ ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಿರುವ ನಗರದ ಮೂರು ಬ್ಯಾಗ್ ಮಾರಾಟ ಅಂಗಡಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಫಾಸ್ಟ್ರಾಕ್ ಮತ್ತು ಅಮೆರಿಕನ್ ಟ್ಯೂರಿಸ್ಟರ್ ಎಂಬ ಕಂಪೆನಿ ಹೆಸರಿನ ನಕಲಿ ಬ್ಯಾಗ್‌ಗಳನ್ನು ಅಸಲಿ ಎಂದು ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೀಸಾ ನೀಡುವುದಾಗಿ ನಂಬಿಸಿ ವಂಚನೆ
ಮಂಗಳೂರು,ಎ.28 ಯುಎಸ್‌ಎನಲ್ಲಿ ಉದ್ಯೋಗ ಪಡೆಯಲು ವೀಸಾ ನೀಡುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬರು ಸುರತ್ಕಲ್‌ನ ಕಟ್ಲದ ನಿವಾಸಿ ರಮೇಶ್ ಮೆಂಡನ್ ಎಂಬವರಿಗೆ 1,25,570 ರೂ. ವಂಚಿಸಿದ ಘಟನೆ ನಡೆದಿದೆ.
ಎ.16ರಂದು ರಮೇಶ್ ಮೆಂಡನ್‌ರಿಗೆ ಕರೆ ಮಾಡಿದ ಥೋಮಸ್ ಎಲ್. ವಜಾದ ಎಂಬವರು ತಾನು ಭಾರತದಲ್ಲಿ ಅಮೆರಿಕದ ರಾಯಭಾರಿ ಹಾಗೂ ಮಿ.ಡೇವಿಡ್ ವೈಟ್ ಎಚ್‌ಆರ್ ಮೇನೆಜರ್ ಎಂದು ಪರಿಚಯಿಸಿಕೊಂಡಿದ್ದರು. ಯುಎಸ್‌ಎನಲ್ಲಿ ಆಯಿಲ್ ಆ್ಯಂಡ್ ಗ್ಯಾಸ್ ಕಂಪೆನಿಯಲ್ಲಿ ಉದ್ಯೋಗ ಇದೆ ಎಂದು ಹೇಳಿ ವೀಸಾ ರಿಜಿಸ್ಟ್ರೇಷನ್‌ಗೆ 43,720ರೂ. ನೀಡುವಂತೆ ಸೂಚಿಸಿದ್ದರು. ಅದರಂತೆ ರಮೇಶ್ ಮೆಂಡನ್ ಸುರತ್ಕಲ್ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಥೋಮಸ್ ಎಲ್ ವಜಾದ ಸೂಚಿಸಿದ ಅಕೌಂಟ್‌ಗೆ ಹಣ ಪಾವತಿಸಿದ್ದರು.
ಎ.23ರಂದು ಮತ್ತೆ ಕರೆ ಮಾಡಿದ ಆತ ಎಂಪ್ಲೋಯ್‌ಮೆಂಟ್ ಅಥೋರೈಸೇಶನ್ ಅಪ್ರೂವಲ್ ಫೀಸ್ ಆಗಿ ರೂ. 81,850 ನೀಡುವಂತೆ ಸೂಚಿಸಿದ್ದನು. ಅದರಂತೆ ರಮೇಶ್ ಮೆಂಡನ್ ಹಣವನ್ನು ಕಾರ್ಪೊರೇಶನ್ ಬ್ಯಾಂಕಿನ ಸುರತ್ಕಲ್ ಶಾಖೆಯಲ್ಲಿ ಪಾವತಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ಥೋಮಸ್ ಎಲ್. ವಜಾದ ಎ.25ರಂದು ಮತ್ತೆ ಕರೆ ಮಾಡಿ 1,40,500 ರೂ. ಪಾವತಿಸುವಂತೆ ಸೂಚಿಸಿದ್ದು ಅನುಮಾನಗೊಂಡ ರಮೇಶ್ ಮೆಂಡನ್ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಿನ್ನದ ಸರ ಕಳ್ಳತನ
ಮಂಗಳೂರು, ಮಾ.29: ನಗರದ ಸುಭಾಷ್ ನಗರ ರಸ್ತೆಯ ಬದಿಯಲ್ಲಿರುವ ಅಂಗಡಿಯೊಂದರಲ್ಲಿ ಸಾಮಗ್ರಿ ಖರೀದಿ ಮಾಡುತ್ತಿದ್ದ ರೋಸ್ ಮಿನಾ ಕೆನಡಿ ಎಂಬವರ ಚಿನ್ನದ ಸರವನ್ನು ಅಪರಿಚಿತನೊಬ್ಬ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಮಹಿಳೆಯು ಅಂಗಡಿಯಲ್ಲಿ ಸಾಮಗ್ರಿ ಖರೀದಿ ಮಾಡುತ್ತಿದ್ದ ಸಂದರ್ಭ ಅದೇ ಅಂಗಡಿಯಲ್ಲಿ ತಂಪು ಪಾನೀಯ ಕುಡಿಯುತ್ತಿದ್ದ ಆರೋಪಿ ಈ ಕೃತ್ಯವೆಸಗಿದ್ದಾನೆ.
ಸುಮಾರು 30 ಸಾವಿರ ರೂ. ವೌಲ್ಯದ ಚಿನ್ನದ ಕ್ರಾಸ್ ಮಾರ್ಕ್ ಪೆಂಡೆಂಟ್ ಇರುವ ಒಟ್ಟು 2 ಪವನ್ ತೂಕದ ಚಿನ್ನದ ಸರವನ್ನು ಆರೋಪಿ ಎಗರಿಸಿದ್ದಾನೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ಲಾಸ್ಟಿಕ್ ಬಳಸಿದರೆ ಕಠಿಣ ಕ್ರಮ: ಡಿಸಿ
ಮಂಗಳೂರು, ಎ.28: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಕ್ಲಿಂಗ್‌ಫಿಲ್ಮ್, ಪ್ಲಾಸ್ಟಿಕ್ ಹಾಳೆ, ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋಬೀಡ್ಸ್‌ನಿಂದ ತಯಾರಾದ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ನಿಷೇಧಿಸಲಾಗಿರುವುದರಿಂದ ಪ್ಲಾಸ್ಟಿಕ್‌ಗೆ ಸಂಬಂಧಿಸಿದ ಸಾಮಗ್ರಿ ಗಳ ತಯಾರಿಕೆ ಮತ್ತು ಬಳಕೆಯಲ್ಲಿ ತಯಾರಕರು, ವಿತರಕರು ಈ ವೃತ್ತಿಯನ್ನು ಮುಂದುವರಿಸಿದಲ್ಲಿ ಅಂತಹ ಸಂಸ್ಥೆ, ಮಳಿಗೆ, ಅಂಗಡಿಗಳ ಮೇಲೆ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ದಾಳಿ ಮಾಡಿ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟಗಳನ್ನು ಕಟ್ಟಿದ್ದರೆ ತೆರವುಗೊಳಿಸಲಾಗುವುದು. ಸಾರ್ವಜನಿಕರು ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿ ಗಳ ಬಳಕೆಯ ಬದಲಿಗೆ ಬಟ್ಟೆ, ರೆಕ್ಸಿನ್, ಪೇಪರ್‌ಗಳಿಂದ ಮಾಡಿದ ಸಾಮಗ್ರಿಗಳನ್ನು ಉಪಯೋಗಿಸುವಂತೆ ಅವರು ವಿನಂತಿಸಿದ್ದಾರೆ.
ಸರಗಳ್ಳತನಗೈದ ಆರೋಪಿ ಬಂಧನ
ಮಂಗಳೂರು, ಎ.28: ಬಿಕರ್ನಕಟ್ಟೆ ಬಳಿ ಮಹಿಳೆಯೊಬ್ಬರ ಸರಗಳ್ಳತನ ಮಾಡಿದ ಆರೋಪದಲ್ಲಿ ಉರ್ವದ ರಜನಿಕಾಂತ್ ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಎ.22ರಂದು ಬಿಕರ್ನಕಟ್ಟೆ ಬಳಿ ನಡೆದುಕೊಂಡು ಹೋಗುತ್ತಿದ್ದ ಜಾನ್ಸಿ ಎಂಬವರ ಸುಮಾರು 20 ಸಾವಿರ ರೂ. ವೌಲ್ಯದ ಚಿನ್ನದ ಸರವನ್ನು ಕುತ್ತಿಗೆಗೆ ಕೈಹಾಕಿ ಕಿತ್ತುಕೊಂಡು ಪರಾರಿಯಾಗಿದ್ದ. ಇಂದು ಆರೋಪಿಯನ್ನು ಬಂಧಿಸಿದ ಪೊಲೀಸರು ಕಳವುಗೈದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಬರ್ಕೆ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ಕೂಡಾ ದಾಖಲಾಗಿರುವ ಬಗ್ಗೆ ತಿಳಿದುಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
1.5 ಕೋಟಿ ರೂ. ವಂಚಿಸಿದ ಆರೋಪಿ ಬಂಧನ
ಮಂಗಳೂರು,ಎ.28: ಗಿಲ್‌ಮೆಲ್ ಎಂಬ ಸಾಫ್ಟ್‌ವೇರ್ ಕಂಪೆನಿಯಲ್ಲಿ ಸಿಇಒ ಆಗಿದ್ದ ಲಕ್ಷ್ಮೀಕಾಂತ್ ಎಂಬಾತನನ್ನು ಒಂದೂವರೆ ಕೋಟಿ ರೂ. ವಂಚನೆ ಆರೋಪದಲ್ಲಿ ಕದ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಲಕ್ಷ್ಮೀಕಾಂತ್ ನಗರದ ಬಿಕರ್ನಕಟ್ಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಸಾಫ್ಟ್‌ವೇರ್ ಕಂಪೆನಿಯಲ್ಲಿ ಸಿಇಒ ಆಗಿದ್ದು, ಕಂಪೆನಿಯ ಅಭಿವೃದ್ಧಿಯ ನೆಪದಲ್ಲಿ ಕಂಪೆನಿಯ ಮಾಲಕರಿಂದ 1.5 ಕೋಟಿ ರೂ.ನ್ನು ಪಡೆದುಕೊಂಡು ಪರಾರಿಯಾಗಿದ್ದ. ಅಲ್ಲದೆ, ಈತ ಇದೇ ಕಂಪೆನಿಯ ಸಿಬ್ಬಂದಿಯ ಹಣವನ್ನು ಪಡೆದುಕೊಂಡು ವಂಚಿಸಿದ್ದ ಎಂಬ ಆರೋಪವಿತ್ತು. ಕದ್ರಿ ಪೊಲೀಸರು ಆರೋಪಿಯನ್�