×
Ad

ಲಲಿತ್ ಮೋದಿ ಗಡಿಪಾರಿಗೆ ವಿನಂತಿ ಬಂದಿಲ್ಲ: ವಿ.ಕೆ.ಸಿಂಗ್

Update: 2016-04-28 23:46 IST

ಹೊಸದಿಲ್ಲಿ, ಎ.28: ಹಣ ಚೆಲುವೆ ಆರೋಪ ಎದುರಿಸುತ್ತಿರುವ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿಯವರನ್ನು ಬ್ರಿಟನ್‌ನಿಂದ ಗಡಿಪಾರು ಮಾಡುವಂತೆ ಸಂಬಂಧಿಸಿದ ಯಾವ ಸಂಸ್ಥೆಯೂ ಇದುವರೆಗೆ ಕೋರಿಕೆ ಸಲ್ಲಿಸಿಲ್ಲವೆಂದು ವಿದೇಶಾಂಗ ವ್ಯವಹಾರ ಸಚಿವಾಲಯ ಇಂದು ಹೇಳಿದೆ.

ಕೋರಿಕೆ ಬಂದಲ್ಲಿ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳುವುದೆಂದು ವಿದೇಶಾಂಗ ಸಹಾಯಕ ಸಚಿವ ವಿಕೆ.ಸಿಂಗ್ ಪ್ರಶ್ನೆಯೊಂದಕ್ಕುತ್ತರವಾಗಿ ರಾಜ್ಯಸಭೆಗೆ ತಿಳಿಸಿದರು.
ಭಾರತವು ಇತ್ತೀಚೆಗೆ ಇಂಟರ್ಪೋಲನ್ನು ಸಂಪರ್ಕಿಸಿ, ಹಣ ಚೆಲುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿಯವರ ವಿರುದ್ಧ ಜಾರಿ ನಿರ್ದೇಶನಾಲಯ ಬಯಸಿರುವ ರೆಡ್ ವಾರಂಟ್‌ನ ಅಧಿಸೂಚನೆಯನ್ನು ಆದಷ್ಟು ಹೊರಡಿಸುವಂತೆ ಕೇಳಿಕೊಂಡಿತ್ತು.
ಬ್ರಿಟನ್‌ನಲ್ಲಿರುವರೆಂದು ಶಂಕಿಸಲಾಗಿರುವ ಅವರ ವಿರುದ್ಧ ಗಡಿಪಾರು ಪ್ರಕ್ರಿಯೆ ಆರಂಭಿಸುವುದಕ್ಕೆ ಪ್ರಕರಣದ ತನಿಖೆ ನಡೆಸುತ್ತಿರುವಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯವೊಂದು ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News