ವೈದ್ಯರು, ರೋಗಿಗಳ ಸಾವು
Update: 2016-04-28 23:48 IST
ಬೇರೂತ್, ಎ. 28: ಸಿರಿಯದ ಅಲೆಪ್ಪೊ ನಗರದ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶವೊಂದರಲ್ಲಿರುವ ಆಸ್ಪತ್ರೆಯೊಂದರ ಮೇಲೆ ಸರಕಾರಿ ಪಡೆಗಳು ವಾಯು ದಾಳಿ ನಡೆಸಿದ್ದು, ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯದ ಮಾನವ ಹಕ್ಕುಗಳ ವೀಕ್ಷಣಾಲಯ ಇಂದು ಹೇಳಿದೆ. ಮೃತರಲ್ಲಿ ಮೂವರು ಮಕ್ಕಳು ಮತ್ತು ನಗರದ ಏಕೈಕ ಮಕ್ಕಳ ವೈದ್ಯ ಸೇರಿದ್ದಾರೆ. ಧ್ವಂಸಗೊಂಡ ಅಲ್-ಖುದ್ಸ್ ಆಸ್ಪತ್ರೆಯನ್ನು ಅಂತಾರಾಷ್ಟ್ರೀಯ ವೈದ್ಯಕೀಯ ದತ್ತಿ ಸಂಸ್ಥೆ 'ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್ಸ್' ನಡೆಸುತ್ತಿತ್ತು. ಆಸ್ಪತ್ರೆಯನ್ನೇ ಗುರಿಯಾಗಿಸಿ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.