×
Ad

ಗೇರು, ಕರಿಮೆಣಸು ಕೃಷಿ ಮಾಹಿತಿ ಕಾರ್ಯಾಗಾರ

Update: 2016-04-28 23:52 IST

ಪುತ್ತೂರು, ಎ.28: ಗೇರು ಬೆಳೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವಂತಹ ಒಂದು ವಾಣಿಜ್ಯ ಬೆಳೆಯಾಗಿದೆ. ಗೇರು ಮತ್ತು ಕರಿಮೆಣಸು ಬೆಳೆಯನ್ನು ರೈತ ವಾಣಿಜ್ಯ ಬೆಳೆಯಾಗಿ ಬೆಳೆದರೆ ಹೆಚ್ಚು ಲಾಭವನ್ನು ಪಡೆಯಬಹುದು. ಭಾರತದಿಂದ ಅತ್ಯಂತ ಹೆಚ್ಚು ಗೇರು ಉತ್ಪನ್ನ ಹೊರ ದೇಶಗಳಿಗೆ ರಫ್ತು ಆಗುತ್ತಿದೆ. ಅದೇ ರೀತಿ ಕರಿಮೆಣಸು ಉತ್ಪನ್ನಗಳ ರಫ್ತಿನಲ್ಲಿ ಭಾರತ 3ನೆ ಸ್ಥಾನದಲ್ಲಿದೆ. ರೈತರು ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿ ಮಾಡುವ ಮೂಲಕ ಹೆಚ್ಚು ಲಾಭವನ್ನು ಪಡೆಯಬಹುದು ಎಂದು ವಿಜಯ ಬ್ಯಾಂಕ್ ಮಂಗಳೂರು ವಲಯ ಕಚೇರಿಯ ಉಪ ಮಹಾಪ್ರಬಂಧಕ ಸುರೇಂದ್ರ ಹೆಗ್ಡೆ ಹೇಳಿದರು.
ಕೆದಂಬಾಡಿ ಗ್ರಾಮದ ಕಡಮಜಲು ಸ್ವೇದ ಬಿಂದು ಗೇರು ತೋಟದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಬೆಳ್ಳಿ ಹಬ್ಬದ ಆಚರಣೆಯ ಅಂಗವಾಗಿ ಆಯೋಸಿದ್ದ ಗೇರು ಮತ್ತು ಕರಿಮೆಣಸು ಕೃಷಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ವೈಜ್ಞಾನಿಕ ಗೇರು ಕೃಷಿಕ ಕಡಮಜಲು ಸುಭಾಷ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಿಂಗಳಾಡಿ ಪಂಚಮಿ ಕ್ಯಾಶ್ಯೂ ಎಕ್ಸೃ್ಪೋಟ್ನ ಮಾಲಕ ಮಿತ್ರಂಪಾಡಿ ಪುರಂದರ ರೈ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿ.ಆರ್.ಡಿ.ಎಫ್ ಮಂಗಳೂರು ಇದರ ಉಪಾಧ್ಯಕ್ಷ ಪ್ರೇಮನಾಥ ಆಳ್ವ, ಮುಖ್ಯ ಪ್ರಬಂಧಕ ಉದಯ್ ಹೆಗಡೆ, ಕೆಯ್ಯೂರು ಗ್ರಾಪಂ ಸದಸ್ಯ, ಪ್ರಗತಿಪರ ಗೇರು ಕೃಷಿಕ ಎ.ಕೆ. ಜಯರಾಮ ರೈ, ಕುಂಬ್ರ ವಿಜಯ ಬ್ಯಾಂಕ್ನ ಶಾಖಾಧಿಕಾರಿ ಗೌತಮ್ ಎನ್. ಶರವು ಉಪಸ್ಥಿತರಿದ್ದರು.
ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ವಿಜ್ಞಾನಿ ಡಾ.ಯದು ಕುಮಾರ್ ಮತ್ತು ವಿಜ್ಞಾನಿ ಡಾ.ಗಂಗಾಧರ್ ನಾಯಕ್ ಕಾರ್ಯಾಗಾರ ನಡೆಸಿಕೊಟ್ಟರು.
ವಿ.ಆರ್.ಡಿ.ಎಫ್ ಮಂಗಳೂರು ಇದರ ಕಾರ್ಯದರ್ಶಿ ಬಿ. ರಾಜೇಂದ್ರ ರೈ ಸ್ವಾಗತಿಸಿದರು. ಸಿ.ಇ.ಒ. ಬಸಪ್ಪಮುಧೋಳ ವಂದಿಸಿದರು. ಈಶ್ವರಮಂಗಲ ಗ್ರಾಮ ಸಮಿತಿಯ ಅಧ್ಯಕ್ಷ ಡಾ. ಕುಮಾರ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News