ಶಿರೂರು ಬಳಿ ಅಕ್ರಮ ಮದ್ಯ ಸಾಗಾಟ ಪತ್ತೆ
ಉಡುಪಿ, ಎ.28: ಕುಂದಾಪುರ ತಾಲೂಕು ಶಿರೂರು ಗ್ರಾಮದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚೆಕ್‌ಪೋಸ್ಟ್ ಬಳಿ ಅಕ್ರಮವಾಗಿ 14,000ಲೀ ಗೋವಾ ರಾಜ್ಯದಲ್ಲಿ ತಯಾರಾದ ಮದ್ಯವನ್ನು ಮಾರಾಟ ಮಾಡಲು ವಾಹನದಲ್ಲಿ ಸಾಗಾಟ ಮಾಡುತ್ತಿರುವುದನ್ನು ಬುಧವಾರ ಸಂಜೆ 4:30ರ ಸುಮಾರಿಗೆ ಪತ್ತೆ ಹಚ್ಚಿ ವಶಪ ಡಿಸಿಕೊಳ್ಳಲಾಗಿದೆ.
ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಕೆ.ಕೆ.ತಾಂಡದ ಎಂ.ಅನಿಲ್ ಕುಮಾರ್(22), ಬಿತ್ಯಾನ ತಾಂಡಾದ ಮೋಟ್ಲ ನಾಯ್ಕ (33) ಎಂಬಿಬ್ಬರನ್ನು ಬಂಧಿಸಲಾಗಿದೆ.ಇದರೊಂದಿಗೆ ಗೋವಾ ಮದ್ಯವನ್ನು ಸಾಗಿಸುತ್ತಿದ್ದ ವಾಹನ ಹಾಗೂ ಒಂದು ಮೊಬೈಲ್ ಫೋನ್‌ನ್ನು ವಶಪಡಿಸಿಕೊ ಳ್ಳಲಾಗಿದೆ. ವಶ ಪಡಿಸಿಕೊಂಡ ಮದ್ಯ, ವಾಹನ ಹಾಗೂ ಸೊತ್ತುಗಳ ವೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಎಲ್. ರಾಜೇ ಂದ್ರ ಪ್ರಸಾದ್ ಮಾರ್ಗದರ್ಶ ನದಲ್ಲಿ, ಉಡುಪಿ ಜಿಲ್ಲಾ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಸ್ ಕೆ.ಎಸ್. ಮುರಳಿ ನಿರ್ದೇಶನದಂತೆ, ಅಬಕಾರಿ ಉಪ ನಿರೀಕ್ಷಕ ಬಿ.ಚಂದ್ರಶೇಖರ ನಾಯ್ಕ ನೇತೃತ್ವದ ತಂಡ ಮತ್ತು ಅಬಕಾರಿ ರಕ್ಷಕ ಶಾಂತಪ್ಪಏಳಗಿ, ಗೃಹ ರಕ್ಷಕ ಗಣೇಶ್ ಹಾಗೂ ವಾಹನ ಚಾಲಕ ಪ್ರಕಾಶ್ ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದರು. ಈ ಬಗ್ಗೆ ಮೊಕದ್ದಮೆಯನ್ನು ದಾಖಲಿಸಲಾಗಿದ್ದು ಮುಂದಿನ ತನಿ ಖೆಯನ್ನು ನಡೆಸಲಾಗುತ್ತಿದೆ ಎಂದು ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.