ಕೃಷಿ ನಾಶದಿಂದ ಬೇಸತ್ತು ರೈತ ಆತ್ಮಹತ್ಯೆ
Update: 2016-04-28 23:53 IST
ಕಾಸರಗೋಡು, ಎ.28: ಬೇಸಿಗೆಯಿಂದ ಅಡಿಕೆ ಕೃಷಿ ನಾಶಗೊಂಡ ಪರಿಣಾಮ ಬೇಸತ್ತು ರೈತರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೋವಿಕ್ಕಾನದ ಇರಿಯಣ್ಣಿಯಲ್ಲಿ ನಡೆದಿದೆ.
ಮೃತರನ್ನು ತಲಕ್ಕಾಡ್ ಮೂಲೆಯ ಅಪ್ಪು ಕುಟ್ಟನ್ ನಾಯರ್ (53) ಎಂದು ಗುರುತಿಸಲಾಗಿದೆ. ಅಪ್ಪುಕುಟ್ಟನ್ ಸೋಮವಾರ ಮೈಲುತುತ್ತು ಸೇವಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ತೋಟದಲ್ಲಿ 400 ಕ್ಕೂ ಅಧಿಕ ಅಡಿಕೆ ಮರಗಳಿದ್ದು, ನೀರಿಲ್ಲದೆ ಒಣಗಿ ಹೋಗಿವೆ. ಇದರಿಂದ ಬೇಸತ್ತು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿ ದುಬಂದಿದೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.